ಮುಂಬೈ, ಅ. 23 (DaijiworldNews/MB) : ಈಗಾಗಲೇ ದೇಶದ್ರೋಹ ಪ್ರಕರಣದ ಅಡಿ ಸಮನ್ಸ್ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಂದು ಸಂಕಷ್ಟ ಎದುರಾಗಿದ್ದು ಇದೀಗ ನ್ಯಾಯಾಂಗದ ವಿರುದ್ಧ ದುರುದ್ದೇಶಪೂರಿತ ಟ್ವೀಟ್ ಮಾಡಿದ ಆರೋಪದಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಮುಂಬೈ ಮೂಲದ ವಕೀಲರಾದ ಆಲೀ ಕಾಸಿಫ್ ಖಾನ್ ದೇಶ್ ಮುಖ್ ಎಂಬವರು ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಈ ಪ್ರಕರಣ ದಾಖಲಿಸಿದ್ದು ಕಂಗನಾ ಅವರು ನ್ಯಾಯಾಂಗದ ವಿರುದ್ಧ ದುರುದ್ದೇಶಪೂರಿತವಾಗಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಂಗನಾ ದೇಶ ವಿಭಜನೆ ಮಾಡುವಂತಹ ಹಾಗೂ ಕಾನೂನುನಿಗೆ ಅಗೌರವ ತೋರುವ ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯದ ಆದೇಶಗಳನ್ನು ಹಾಸ್ಯ ಮಾಡುತ್ತಿದ್ದಾರೆ. ಬಾಂದ್ರಾ ಕೋರ್ಟ್ ಎಫ್ಐಆರ್ ದಾಖಲಿಸಲು ಆದೇಶ ನೀಡಿದ್ದಕ್ಕೆ ಅದನ್ನು ಪಪ್ಪು ಸೇನಾ ಎಂದು ಕರೆದಿದ್ದಾರೆ.
ನಟಿಯ ವಿರುದ್ದ 10 ದಿನಗಳಲ್ಲಿ ಮೂರು ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ವರದಿ ತಿಳಿಸಿದೆ.