ಬೆಂಗಳೂರು,ಅ. 23 (DaijiworldNews/HR): ಕೊರೊನಾ ಸೋಂಕಿನ ಕಾರಣದಿಂದ ಕಳೆದ ಕೆಲವು ತಿಂಗಳಿನಿಂದ ಮುಚ್ಚಿರುವ ಇಂಜನಿಯರ್, ಡಿಪ್ಲೊಮಾ, ಪಿಜಿ, ಪದವಿ ಕಾಲೇಜುಗಳನ್ನು ನವೆಂಬರ್ 17ರಿಂದ ಮತ್ತೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ, ಡಿಸಿಎಂ ಅಶ್ವಥನಾರಾಯಣ ಅವರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪದವಿ ಕಾಲೇಜು ಪ್ರಾರಂಭಿಸುವ ಕುರಿತಂತೆ ಪ್ರಾತ್ಯಕ್ಷಿಕೆ ಮತ್ತು ಚರ್ಚೆ ನಡೆಸಿದ ಬಳಿಕ ನವೆಂಬರ್ 17 ಕ್ಕೆ ಪದವಿ ಕಾಲೇಜು ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಆನ್ ಲೈನ್ ನಲ್ಲಿಯೂ ಕಲಿಯಬಹುದು. ಅಥವಾ ಕ್ಲಾಸಿಗೂ ಬರಬಹುದು. ಆದರೆ ಕ್ಲಾಸ್ ಗೆ ಬರಬೇಕಾದರೆ ವಿದ್ಯಾರ್ಥಿಗಳು ತಂದೆ ತಾಯಿಯಿಂದ ಪರವಾನಗಿ ಪತ್ರ ತರಬೇಕು ಎಂದು ತಿಳಿಸಿದ್ದಾರೆ.
ಇನ್ನು ಯುಜಿಸಿ ಗೈಡ್ ಲೈನ್ಸ್ ಪ್ರಕಾರ ನವೆಂಬರ್ ನಲ್ಲಿ ಆಫ್ ಲೈನ್ ಶಾಲೆ ತೆರೆಯಲು ಅವಕಾಶವಿತ್ತು. ಎಲ್ಲಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್, ಪ್ರತಿ ಶಾಲೆಯಲ್ಲಿಯೂ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುವುದು. ನವೆಂಬರ್ 17 ಕ್ಕೆ ಎಲ್ ಎಂಎಸ್ ಆನ್ ಲೈನ್ ಪೋರ್ಟಲ್ ಉದ್ಘಾಟನೆಯಾಗಲಿದೆ. ದೇಶದಲ್ಲಿಯೇ ಮೊದಲ ಬಾರಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.