ಪಾಟ್ನ,ಅ. 23 (DaijiworldNews/HR): ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹತ್ತು ವರ್ಷಗಳ ಕಾಲ ಬಿಹಾರದ ಅಭಿವೃದ್ಧಿಗೆ ಯಾವುದೇ ನೆರವು ನೀಡದೆ ಹಾಳು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಇಂದು ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರ ಭಾಷಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಹಾರದ ಅಭಿವೃದ್ದಿಗಾಗಿ ಮತ್ತೊಮ್ಮೆ ಎನ್ ಡಿಎಗೆ ಮತ ನೀಡಿ ಆಶೀರ್ವದಿಸಬೇಕು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಎನ್ ಡಿಎ ಸರ್ಕಾರ ರದ್ದುಗೊಳಿಸಿದ್ದು, ಆದರೆ ವಿರೋಧ ಪಕ್ಷಗಳು ಅದನ್ನು ಮತ್ತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿರುವುದಾಗಿ ದೂರಿದ್ದಾರೆ.
ಇನ್ನು ಬಿಹಾರವನ್ನು ಯಾರು ಹಿಂದುಳಿಯುವಂತೆ ಮಾಡಿದ್ದಾರೆ ಎಂಬುದನ್ನು ಜನರು ಮರೆಯಬಾರದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು, ಭ್ರಷ್ಟಾಚಾರ ತಾಂಡವವಾಡಿತ್ತು ಎಂದು ಪರೋಕ್ಷವಾಗಿ ಆರ್ ಜೆಡಿಯನ್ನು ಮೋದಿ ಟೀಕಿಸಿದ್ದಾರೆ.