ಮುಂಬೈ, ಅ. 23 (DaijiworldNews/HR): ಸರ್ಕಾರ ನನ್ನ ವಿರುದ್ಧ ದೂರು ದಾಖಲಿಸಿದ್ದು, ನನ್ನನ್ನು ಸಾವರ್ಕರ್ನಂತೆ ಜೈಲಿಗೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಂಗನಾ, ನಾನು ನೇತಾ ಬೋಸ್, ಸಾವರ್ಕರ್ ಮತ್ತು ಝಾನ್ಸಿ ರಾಣಿಯಂತೆ ನನ್ನ ಕೆಲಸವನ್ನು ಮಾಡುತ್ತಿದ್ದೇನೆ, ಇಂದು ಸರ್ಕಾರವು ನನ್ನನ್ನು ಜೈಲಿಗೆ ಹಾಕಲು ಪ್ರಯತ್ನಿಸುತ್ತಿದೆ, ಅದು ನನ್ನ ಆಯ್ಕೆಗಳ ಬಗ್ಗೆ ನನಗೆ ವಿಶ್ವಾಸವನ್ನುಂಟುಮಾಡುತ್ತದೆ, ಶೀಘ್ರದಲ್ಲೇ ಜೈಲಿನಲ್ಲಿರಲು ಕಾಯುತ್ತಿದ್ದೇನೆ, ಇದು ನನ್ನ ಜೀವನಕ್ಕೆ ಅರ್ಥ ನೀಡುತ್ತದೆ ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಇನ್ನು ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಆಲೀ ಕಾಸಿಫ್ ಖಾನ್ ದೇಶ್ ಮುಖ್ ಪ್ರಕರಣ ದಾಖಲಿಸಿದ್ದು, ಕಂಗನಾ ರಣಾವತ್ ದೇಶದ್ರೋಹವೆಸಗಿದ್ದಾರೆ ಹಾಗೂ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಹರಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.