ಬೆಂಗಳೂರು, ಅ.23 (DaijiworldNews/PY): ನಾನೇನು ಬಂಡೆ, ಕನಕಪುರ ಬಂಡೆ ಎಂದು ಹೆಸರು ಇಟ್ಟುಕೊಂಡಿಲ್ಲ. ಬಂಡೆ ಎನ್ನುವುದು ಪ್ರಕೃತಿ, ಬಂಡೆಯನ್ನು ಕಡೆದರೆ ಆಕೃತಿ, ಪೂಜಿಸುವುದು ಸಂಸ್ಕೃತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರಿಗೆ ನನ್ನ ಬಗ್ಗೆ ಮಾತನಾಡಿದರೆ ಪ್ರಮೋಷನ್ ದೊರಕುತ್ತದೆ ಎಂದು ಅನಿಸುತ್ತಿದೆ. ಹಾಗಾಗಿ ಚುನಾವಣೆಯ ಸಂದರ್ಭ ಅಶ್ವತ್ಥ ನಾರಾಯಾಣ, ಅಶೋಕ ಹಾಗೂ ಸಿ.ಟಿ. ರವಿ ಅವರು ನನ್ನ ಬಗ್ಗೆ ಮಾತನಾಡುತ್ತಿರುವುದು ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಂಡೆಯನ್ನು ಯಾಋಓ ಡೈನಾಮಿಟ್ ಇಟ್ಟು ಪುಡಿ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನೇನು ಬಂಡೆ, ಕನಕಪುರ ಬಂಡೆ ಎಂದು ಹೆಸರು ಇಟ್ಟುಕೊಂಡಿಲ್ಲ. ಬಂಡೆ ಎನ್ನುವುದು ಪ್ರಕೃತಿ, ಬಂಡೆಯನ್ನು ಕಡೆದರೆ ಆಕೃತಿ, ಪೂಜಿಸುವುದು ಸಂಸ್ಕೃತಿ. ಜನರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ನಾನು ಬಂಡೆಯಾಗಿ ವಿಧಾನಸೌಧಕ್ಕೆ ಚಪ್ಪಡಿಯಾದರೆ, ಜನರಿಗೆ ನಡೆದುಕೊಂಡು ಹೋಗಲು ಸಹಾಯವಾಗುತ್ತದೆ. ಒಂದು ವೇಳೆ ಡೈನಾಮಿಟ್ ಇಟ್ಟು ಪುಡಿ ಮಾಡಿದರೆ ಜಲ್ಲಿ ಕಲ್ಲು ಆಗುತ್ತೇನೆ. ಎಲ್ಲಾ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎದು ಹೇಳಿದ್ದಾರೆ.
ಆರ್.ಆರ್ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ದಿ.ಐಎಎಸ್ ಅಧಿಕಾರಿ, ಡಿಕೆ ರವಿ ಅವರನ್ನು ಅಗ್ನಿ ಸಾಕ್ಷಿಯಾಗಿ ವಿವಾಹವಾಗಿದ್ದಾರೆ. ಆದರೆ, ಶೋಭಕ್ಕ ಪತಿಯ ಹೆಸರು ಬಳಸಬಾರದು ಎಂದು ಹೇಳುತ್ತಾರೆ ಏಕೆ? ಎಂದು ಕೇಳಿದ್ದಾರೆ.
ಈ ಹಿಂದೆ ರಮ್ಯಾ ಹಾಗೂ ತೇಜಸ್ವಿನಿ ಅವರನ್ನು ನಿಲ್ಲಿಸಿದ್ದೆವು. ಈಗ ಕುಸುಮಾ ಅವರು ನಿಂತಿದ್ದಾರೆ. ಆದರೆ, ಶೋಭಕ್ಕ ಮಾತ್ರ ನೀನು ಗಂಡನ ಹೆಸರನ್ನು ಬಳಕೆ ಮಾಡಬಾರದು ಎಂದು ಹೇಳುತ್ತಾರೆ. ನೀವು ಕೂಡಾ ಅಅದೇ ಸ್ಥಾನದಲ್ಲಿರುತ್ತಿದ್ದರೆ ಇದೇ ರೀತಿಯಾಗು ಹೇಳುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆ ಮುಗಿದ ಬಳಿಕ ಬಂಡೆ ಛಿದ್ರವಾಗುತ್ತದೆ, ಹುಲಿಯಾ ಕಾಡಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದರು.