ಜಮ್ಮು-ಕಾಶ್ಮೀರ, ಅ.23 (DaijiworldNews/PY): ಬಾರಾಮುಲ್ಲಾ ಜಿಲ್ಲೆಯಲ್ಲಿಉಗ್ರರ ವಿರುದ್ದದ ಕಾರ್ಯಚರಣೆಯ ವೇಳೆ ಪೋಷಕರನ್ನುಕರೆದುಕೊಂಡು ಹೋಗಿದ್ದ ಕಾರಣ ಇಬ್ಬರು ಉಗ್ರರು ಭಾರತೀಯ ಸೇನೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.
ಶರಣಾದ ಉಗ್ರರನ್ನು ಅಬಿದ್ ಮತ್ತು ಮೆಹ್ರಾಜ್ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ತಮ್ಮ ಮನೆಯಿಂದ ಪರಾರಿಯಾಗಿ ಪಾಕಿಸ್ತಾನಿ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ತುಜ್ಜಾರ ಪ್ರದೇಶದಲ್ಲಿ ಅಡಗಿದ್ದರು. ಭಾರತೀಯಾ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆ ಕಾರ್ಯಚರಣೆ ಪ್ರಾರಂಭಿಸಿದ್ದರು. ಈ ವೇಳೆ ಸೇನಾಪಡೆ ಶರಣಾಗಲು ಸೂಚನೆ ನೀಡಿತ್ತು. ಆದರೆ, ಉಗ್ರರು ಶರಣಾಗಲು ನಿರಾಕರಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿದ್ದ ಪೋಷಕರು ಉಗ್ರರಿಬ್ಬರ ಮನವೊಲಿಸಿದ್ದಾರೆ. ಪೋಷಕರ ಮಾತಿಗೆ ಸಮ್ಮತಿಸಿದ ಉಗ್ರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.
ಅ.13ರಂದು ಇದೇ ರೀತಿಯಾದ ಘಟನೆ ನಡೆಸಿದ್ದು, ಚಾದೂರಾ ಪ್ರದೇಶದಿಂದ ಜಹಾಂಗೀರ್ ಅಹ್ಮದ್ ಬಟ್ ಎಂಬ ಯುವಕ ನಾಪತ್ತೆಯಾಗಿದ್ದ. ಮಗನ ನಾಪತ್ತೆಯಾಗಿದ್ದಾನ ಎಂದು ಪೋಷಕರು ಹುಡುಕಾಡಿದ್ದಾರೆ. ಆದರೆ, ಅ.16ರಂದು ನಡೆದ ಜಂಟಿ ಕಾರ್ಯಾಚರಣೆಯ ಸಂದರ್ಭ ಆ ಯುವಕ ಪತ್ತೆಯಾಗಿದ್ದಾನೆ. ಆತನಿಗೆ ಸೇನೆಯು ಶರಣಾಗುವಂತೆ ಸೂಚಿಸಿತ್ತು. ಬಳಿಕ ಆತ ಶರಣಾಗಿದ್ದಾನೆ ಎಂದು ವರದಿ ಹೇಳಿದೆ.