ಮುಂಬೈ, ಅ. 24 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ ಎಂದು ಬಾಂಬೆ ಹೈಕೋರ್ಟ್ಗೆ ಕೇಂದ್ರಿಯ ತನಿಖಾ ತಂಡ ಸಿಬಿಐ ತಿಳಿಸಿದೆ.
ಟಿವಿ ಸುದ್ದಿಯಲ್ಲಿನ ಅಂಶಗಳ ನಿಯಂತ್ರಣಕ್ಕೆ ಶಾಸನ ರಚನೆ ಅಗತ್ಯವಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಪೀಠ, ಮಾಧ್ಯಮವು ಇಬ್ಭಾಗವಾಗಿದೆ. ಇದು ಒಂದು ಮಾಧ್ಯಮವನ್ನು ನಿಯಂತ್ರಣ ಮಾಡುವ ಪ್ರಶ್ನೆಯಲ್ಲ. ಆದರೆ ಪರಿಶೀಲನೆ ಮತ್ತು ಸಮತೋಲನ ಮುಖ್ಯವಾಗಿ ಎಂದು ಹೇಳಿದೆ.
ಇನ್ನು ಈ ವಿಚಾರಣೆಯ ಸಂದರ್ಭ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಸುಶಾಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಿಬಿಐ ಸೋರಿಕೆ ಮಾಡಿಲ್ಲ. ಇಡಿ ಮತ್ತು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಕೂಡಾ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಿಲ್ಲ ಎಂದು ಹೇಳಿದ್ದು ಈ ಮೂರು ಕೇಂದ್ರಿಯಾ ಏಜೆನ್ಸಿಗಳು ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿವೆ. ನ್ಯಾಯಾಲಯವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.