ಹೊಸದಿಲ್ಲಿ,ಅ. 24 (DaijiworldNews/HR): ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ತನ್ನ ಭಾಷಣದಲ್ಲಿ ಅಥವಾ ನಿರೂಪಣೆಯ ಸಂಧರ್ಭದಲ್ಲಿ 'ನೇಶನ್ ವಾಂಟ್ಸ್ ಟು ನೊ' ಎಂಬ ಪದ ಬಳಸಿಕೊಳ್ಳಬಹುದಾಗಿದೆ ಎಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ.
ಅರ್ನಬ್ ಗೋಸ್ವಾಮಿ ತನ್ನ ಕಾರ್ಯಕ್ರಮಗಳಲ್ಲಿ 'ನೇಶನ್ ವಾಂಟ್ಸ್ ಟು ನೋ' ಎಂಬ ಟ್ಯಾಗ್ಲೈನ್ ಬಳಸಿಕೊಳ್ಳುವುದನ್ನು ಪ್ರಶ್ನಿಸಿ ಬೆನೆಟ್ ಕೋಲ್ಮ್ಯಾನ್ ಆಯಂಡ್ ಕಂ. ಲಿಮಿಟೆಡ್ ದಿಲ್ಲಿ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿತ್ತು. ಈ ಕುರಿತು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ನಬ್ ಅವರು ಯಾವುದೇ ಸುದ್ದಿ ವಾಹಿನಿಯಲ್ಲಿ ತನ್ನ ಭಾಷಣ ಅಥವಾ ನಿರೂಪಣೆಯಲ್ಲಿ ಈ ಪದ ವಾಕ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
ಅರ್ನಬ್ ಅವರು 'ನೇಷನ್ ವಾಂಟ್ಸ್ ಟು ನೊ' ಟ್ಯಾಗ್ಲೈನ್ ಬಳಸದಂತೆ ಹಾಗೂ ರಿಪಬ್ಲಿಕ್ ವಾಹಿನಿಯ ಮಾಲೀಕತ್ವ ಹೊಂದಿರುವ ಎಆರ್ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಚರ್ಚಾ ಕಾರ್ಯಕ್ರಮಕ್ಕೆ 'ನ್ಯೂಸ್ ಹವರ್' ಎಂದು ಹೆಸರಿಟ್ಟಿರುವುದನ್ನು ತಡೆಯಬೇಕೆಂದು ಬೆನೆಟ್ ಕೋಲ್ಮನ್ ಆಯಂಡ್ ಕಂಪನಿ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.