ಬೆಂಗಳೂರು, ಅ. 24 (DaijiworldNews/HR): ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷದಲ್ಲಿ ಒಕ್ಕಲಿಗ ನಾಯಕತ್ವಕ್ಕೆ ಕಾದಾಟ ಆರಂಭವಾಗಿದ್ದು, ಇದೀಗ ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಾಗುತ್ತಾರೆ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಜಿ.ಸಿ.ಚಂದ್ರಶೇಖರ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಒಕ್ಕಲಿಕ ಸಮುದಾಯ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿ.ಸಿ.ಚಂದ್ರಶೇಖರ್, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕೆಂದು ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಒಂದಿಷ್ಟು ಮಂದಿ ಬಯಸುತ್ತಿದ್ದರೆ, ಮತ್ತೊಂದಷ್ಟು ಜನ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ ಎಂದರು.
ಇನ್ನು ನಮ್ಮ ಸಮುದಾಯದ ನಾಯಕರು ಮೂರು ಪಕ್ಷದಲ್ಲಿದ್ದಾರೆ, ಆದರೆ ಅವರು ಸಾಂಪ್ರದಾಯಿಕ ವೈರಿಗಳಾಗಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಹೋಲಿಸಿದರೆ ಬಿಜೆಪಿಯ ಅಶ್ವಥ ನಾರಾಯಣ್ ಇನ್ನೂ ಕಿರಿಯರು, ಆದರೆ ಡಿ.ಕೆ ಶಿವಕುಮಾರ್ ಹಿರಿಯ ರಾಜಕಾರಣಿ. ಶಿವಕುಮಾರ್ ಅವರ ಬಗ್ಗೆ ಮಾತಾಡಬೇಕಾದರೆ ತಲೆಯಿಂದಲ್ಲ, ಹೃದಯದಿಂದ ಮಾತನಾಡಬೇಕು. ಯಾರೋ ಏನೇನೋ ಹೇಳಿಕೊಡುತ್ತಾರೆ ಎಂದು ಮಾತನಾಡಬೇಡಿ ಎಂಬುದಾಗಿ ಎಚ್ಚರಿಸಿದ್ದಾರೆ.