ಬೆಂಗಳೂರು, ಅ. 24 (DaijiworldNews/MB) : ''ನಾನು ಬಂಡೆಯಲ್ಲ, ಜನರು ಸರ್ಕಾರಕ್ಕೆ ಎಸೆಯುವ ಕಲ್ಲು. ನನಗೆ ರಾಜ್ಯದ ಜನ ವಿಧಾನಸೌಧಕ್ಕೆ ಹೋಗುವ ಮೆಟ್ಟಿಲಿನ ಚಪ್ಪಡಿಕಲ್ಲಾಗುವ ಬಯಕೆ. ಬರೀ ಕಲ್ಲಾಗಿರಲು ಇಷ್ಟವಿಲ್ಲ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆರ್ಆರ್ ನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಪರ ಪ್ರಚಾರ ಮಾಡಿದ ಅವರು, ''ಕೆಲವರು ಬಂಡೆಯನ್ನು ಡೈನಮೇಟ್ ಇಟ್ಟು ಪುಡಿ ಮಾಡುತ್ತೇವೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದಾರೆ. ಹಾಗೆ ಪುಡಿಯಾದ ಬಂಡೆ ಜಲ್ಲಿಕಲ್ಲಾಗಿ ಜನರಿಗೆ ಮನೆ, ದೇಗುಲ ಕಟ್ಟಲು ಸಹಕಾರಿಯಾಗುತ್ತದೆ. ಹೆಚ್ಚಾದರೆ ಜನರು ಅದೇ ಕಲ್ಲನ್ನು ಜನರು ಸರ್ಕಾರಕ್ಕೆ ಎಸೆಯುತ್ತಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.
''ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಚುನಾವಣೆಯ ಸಂದರ್ಭದಲ್ಲಿ ಕುಸುಮಾ ಅವರು ತನ್ನ ಮೃತ ಗಂಡನ ಹೆಸರನ್ನು ಬಳಸಬಾರದು ಎಂದೆಲ್ಲಾ ಹೇಳುತ್ತಾರೆ. ಆದರೆ ಅದು ಹೇಗೆ ಸಾಧ್ಯ. ಶೋಭಕ್ಕ ನೀನು, ನಿನ್ನ ಮಗಳೋ ತಂಗಿಯೋ ಇದ್ದಾರೆ ಏನು ಹೇಳುತ್ತಿದೆ'' ಎಂದು ಪ್ರಶ್ನಿಸಿದ್ದಾರೆ.