ಮಹಾರಾಷ್ಟ್ರ,ಅ. 24 (DaijiworldNews/HR): ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಐಸೋಲೇಷನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಕಳೆದ ಲಾಕ್ ಡೌನ್ ಶುರುವಾಗಿನಿಂದಲೂ ನಿರಂತರವಾಗಿ ಜನರ ಸೇವೆಗಾಗಿ ದುಡಿಯುತ್ತಿದ್ದೆ. ಇಂತಹ ನನಗೆ ದೇವರು ವಿಶ್ರಾಂತಿ ತಗೊಳ್ಳಿ ಎಂಬುದಾಗಿ ಸೂಚಿಸಿದ್ದಾನೆ. ಕೊರೊನಾ ಪರೀಕ್ಷೆಗೆ ಒಳಗಾದಗ ನನ್ನ ವರದಿ ಪಾಸಿಟಿವ್ ಬಂದಿದ್ದು ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ಹೋಂ ಐಸೋಲೇಷನ್ ಆಗಿದ್ದು, ಚಿಕಿತ್ಸೆ ಪಡೆಯಲಿರುವುದಾಗಿ ಟ್ವೀಟ್ ಮಾಡಿದ್ದಾರೆ.