ನವದೆಹಲಿ, ಅ.24 (DaijiworldNews/PY): ಕೇಂದ್ರ ಸರ್ಕಾರವು 2020-2021ರ ಆರ್ಥಿಕ ವರ್ಷದ ಜಿಎಸ್ಟಿ ಸಂಗ್ರಹದಲ್ಲಿನ ಕೊರತೆ ಪರಿಹರಿಸಲು ವಿಶೇಷ ಯೋಜನೆಯಡಿ ಸಾಲ ಮಂಜೂರು ಮಾಡಿದ್ದು, ಕರ್ನಾಟಕ ಸೇರಿದಂತೆ 16 ಜಿಲ್ಲೆಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ.
ಒಟ್ಟಾರೆಯಾಗಿ 21 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು ಈ ವಿಶೇಷ ಯೋಜನೆಯನ್ನು ಆಯ್ಕೆ ಮಾಡಿಕೊಂಡಿವೆ.
ಕೇಂದ್ರವು ನೀಡಿದ ಮೊದಲ ಆಯ್ಕೆಗೆ ಒಪ್ಪಿದ 21 ರಾಜ್ಯಗಳ ಪೈಕಿ 16 ರಾಜ್ಯಗಳಿಗೆ ಈ ಹಣವನ್ನು ನೀಡಲಾಗಿದೆ.
ಕರ್ನಾಟಕ ಸೇರಿದಂತೆ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ್ ಸೇರಿದಂತೆ ಎರಡು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಹಾಗೂ ಜಮ್ಮು-ಕಾಶ್ಮೀರ ಪ್ರದೇಶಗಳಿಗೆ ಇಂದು ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ 6,000 ಕೋಟಿ.ರೂ.ಗಳನ್ನು ವರ್ಗಾಯಿಸಿದೆ.