ನವದೆಹಲಿ,ಅ. 24 (DaijiworldNews/HR): ಕೊರೊನಾ ಸೋಂಕಿನಿಂದಾಗಿ ದೇಶದ ಎಲ್ಲಾ ಜನರು ಆರ್ಥಿಕವಾಗಿ ಹಿಂದುಳಿದಿದ್ದು, ಜನರ ಉಪಯೋಗಕ್ಕಾಗಿ ಕೊರೊನಾ ಲಸಿಕೆ ಉಚಿತವಾಗಿ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ನಮ್ಮ ದೇಶ ಕೊರೊನಾ ಲಸಿಕೆಯನ್ನು ಉಚಿತವಾಗಿ ಪಡೆಯಬೇಕು, ಇದು ಇಡೀ ದೇಶದ ಹಕ್ಕಾಗಿದ್ದು, ಎಲ್ಲ ಜನರು ಕೊರೊನಾ ಸೋಂಕಿನಿಂದ ತೊಂದರೆಗೊಳಗಾಗಿದ್ದು, ದೇಶದಲ್ಲಿ ಉಚಿತವಾಗಿ ಲಸಿಕೆಯನ್ನು ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಕೊರೊನಾ ರೋಗ ನಿರೋಧಕ ಕಾರ್ಯಕ್ರಮದಡಿ ಕೇಂದ್ರವು ನೇರವಾಗಿ ಔಷಧವನ್ನು ಸಂಗ್ರಹಿಸಿ ಲಭ್ಯವಾಗುವಂತೆ ವಿತರಿಸಲಾಗುವುದು ಎಂದು ತಿಳಿದು ಬಂದಿದೆ.