ಭೋಪಾಲ್, ಅ.25 (DaijiworldNews/PY): ಕೈ ಪಕ್ಷಕ್ಕೆ ಮತ್ತೊಂದು ಆಘಾತವಾಗಿದ್ದು, ಇಂದು ಮುಂಜಾನೆ ಕಾಂಗ್ರೆಸ್ನ ಮತ್ತೋರ್ವ ಶಾಸಕ ರಾಹುಲ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ದಾಮೋಹ್ನ ಶಾಸಕ ರಾಹುಲ್ ಸಿಂಗ್ ಅವರು ಭೋಪಾಲ್ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶರ್ಮಾ, ಸ್ಫೀಕರ್ ರಾಮೇಶ್ವರ ಶರ್ಮಾ ಅವರಿಗೆ ದಾಮೋಹ್ನ ಶಾಸಕ ರಾಹುಲ್ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ. ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಹುಲ್ ಸಿಂಗ್, ಕಾಂಗ್ರೆಸ್ ಜೊತೆ ನಾನು ಸುಮಾರು 14 ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ್ದೇನೆ. ಆದರೆ, ನನಗೆ ಅಭಿವೃದ್ದಿಗಾಗಿ ಕಾರ್ಯನಿರ್ವಹಿಸಲು ಆಗಲಿಲ್ಲ. ಬಿಜೆಪಿಗೆ ನಾನು ಸ್ವಇಚ್ಛೆಯಿಂದ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದ್ದಾರೆ.
ರಾಹುಲ್ ಸಿಂಗ್ ಲೋದಿ ಅವರು ದಾಮೋಹ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.