ಮೈಸೂರು, ಅ. 25 (DaijiworldNews/HR): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಡಿ ಕೆ ಶಿವಕುಮಾರ್ ಅವರ ಮಾತನ್ನು ಸಿದ್ದರಾಮಯ್ಯನೇ ಕೇಳಲ್ಲ. ಅವರ ಮಾತಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವೂ ಇಲ್ಲ. ನಾನು, ಮುನ್ನಿರತ್ನ, ಭೈರತಿ ನಿಷ್ಠಾವಂತ ಕಾರ್ಯಕರ್ತರು ಪಕ್ಷ ತೊರೆಯುವಾಗ ಇವರೆಲ್ಲಾ ಎಲ್ಲಿ ಹೋಗಿದ್ರು. ಆಗ ಎಲ್ಲಾ ವಿಚಾರವನ್ನು ನಾವು ಇವರಿಗೆ ತಿಳಿಸಿರಲಿಲ್ವಾ ಎಂಬುದಾಗಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ಗೆ ಕಾರ್ಯಕರ್ತರಿಲ್ಲ, ಎಲ್ಲರೂ ಮುನ್ನಿರತ್ನ ಅವರ ಹಿಂದೆ ಬಂದಿದ್ದಾರೆ. ಕಾಂಗ್ರೆಸ್ ಹೊರಗಿನಿಂದ ಜನರನ್ನು ಕರೆ ತಂದು ಬಿತ್ತಿ ಪತ್ರ ಹಂಚಿಸುತ್ತಿದ್ದಾರೆ. ಇದನ್ನೇ ನಮ್ಮ ಅಭ್ಯರ್ಥಿ ಭಯದ ವಾತಾವರಣ ಎಂದು ಹೇಳಿರುವುದು ಎಂದರು.
ಇನ್ನು ಮುನ್ನಿರತ್ನ ಕಳೆದ 6 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದು, ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದರು.