ನವದೆಹಲಿ, ಅ.26 (DaijiworldNews/PY): ಭಾರತ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಅವರು ನ.4ರಿಂದ ಮೂರು ದಿನಗಳ ಕಾಲ ನೇಪಾಳ ಪ್ರವಾಸ ಕೈಗೊಳ್ಳದ್ದಾರೆ.
ಸೇನಾ ಮುಖ್ಯಸ್ಥರು ನ.4ರಿಂದ 6ರವರೆಗೆ ನೇಪಾಳ ಭೇಟಿ ನೀಡಲಿದ್ದು, ರಕ್ಷಣಾ ಹಾಗೂ ಭದ್ರತಾ ಕ್ಷೇತ್ರಗಳು ಸೇರಿದಂತೆ ಒಟ್ಟಾರೆ ಸಂಬಂಧಗಳನ್ನು ಬಲಗೊಳಿಸಲು ಭೇಟಿ ನೀಡಲಿದ್ದಾರೆ ಎಂದು ಉನ್ನತಸರ್ಕಾರಿ ಮೂಲವು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಭಾರತ-ನೇಪಾಳ ಸಂಬಂಧ ಹದಗೆಟ್ಟಿದೆ. ತನ್ನ ದೇಶದ ತಪ್ಪು ನಕ್ಷೆಯನ್ನು ಪ್ರಕಟಿಸಿದ್ದ ನೇಪಾಳವು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಭಾರತ-ನೇಪಾಳ ನಡುವೆ ಹದಗೆಟ್ಟಿರುವ ಬಾಂಧವ್ಯವು ವೃದ್ದಿಗೆ ಇದು ನಿರ್ಣಾಯಕವಾಗಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.