ನವದೆಹಲಿ,ಅ. 26 (DaijiworldNews/HR): ಚೀನಾವು ಭಾರತದ ಭೂ ಪ್ರದೇಶವನ್ನು ಆಕ್ರಮಿಸಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಗೊತ್ತಿದೆ, ಆದರೆ ಅದನ್ನು ಹೇಳಲು ಭಯಪಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮೋಹನ್ ಭಾಗವತ್ ಅವರು ಮಿಲಿಟರಿ ದೃಷ್ಟಿಯಿಂದ ಭಾರತವು ಚೀನಾಕ್ಕಿಂತ ಉತ್ತಮವಾಗಿ ಸಿದ್ದವಾಗಬೇಕಾದ ಆಗತ್ಯವಿದೆ ಎಂದು ಹೇಳಿದ್ದರು.
ಮೋಹನ್ ಭಾಗವತ್ ಅವರ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಹೃದಯದ ಆಳದಲ್ಲಿ, ಮೋಹನ್ ಭಾಗವತ್ ಅವರಿಗೆ ಸತ್ಯ ಏನು ಎಂಬುದು ತಿಳಿದಿದೆ. ಆ ಸತ್ಯ ಏನೆಂದರೆ, ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿದೆ. ಇದಕ್ಕೆ ಭಾರತ ಸರ್ಕಾರ ಹಾಗೂ ಆರ್ ಎಸ್ಎಸ್ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ.