ಮುಂಬೈ, ಅ. 26 (DaijiworldNews/HR): ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಂಘರ್ಷ ಮುಂದುವರೆದಿದ್ದು, ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ತಮ್ಮ ಭಾಷಣದಲ್ಲಿ ನೀಡಿದ ಸಲಹೆಯನ್ನು ರಾಜ್ಯಪಾಲರು ಪಾಲಿಸಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮೋಹನ್ ಭಾಗ್ವತ್ ಹಿಂದುತ್ವದ ವ್ಯಾಖ್ಯಾನವನ್ನು ಮಾನದಂಡವಾಗಿ ಪರಿಗಣಿಸಿ, ನಮಗೆ ಯಾರಾದರೂ ಸವಾಲು ಹಾಕಲು ಬಯಸಿದರೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ನೀವು ನಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತೀರಿ. ಮಹಾರಾಷ್ಟ್ರದಲ್ಲಿ ನೀವು ಗೋಮಾಂಸ ನಿಷೇಧಿಸಿದ್ದೀರಿ. ಗೋವಾದಲ್ಲಿ ನಿಮಗೆ ಗೋಮಾಂಸ ಇದೆ. ಇದು ನಿಮ್ಮ ಹಿಂದುತ್ವವೇ?" ಎಂದು ಉದ್ಧವ್ ಪ್ರಶ್ನಿಸಿದ್ದಾರೆ.
ಇನ್ನು ಹಿಂದುತ್ವ ಕೇವಲ ಪೂಜೆಗಳಿಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಜನ ಕಪ್ಪು ಟೊಪ್ಪಿ ಧರಿಸಿ ನಮ್ಮ ನಂಬಿಕೆಗಳನ್ನು ಪ್ರಶ್ನಿಸುತ್ತಿದ್ದಾರೆ. ನಮ್ಮನ್ನು ಜಾತ್ಯತೀತರು ಎಂದು ಕರೆಯುವವರು ಮೋಹನ್ ಭಾಗ್ವತ್ ಅವರ ಇಂದಿನ ಭಾಷಣ ಕೇಳಿ ಎಂದರು.