ರಾಯ್ಪುರ,ಅ. 26 (DaijiworldNews/HR): 10 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 32 ನಕ್ಸಲರು ಪೊಲೀಸರ ಮುಂದೆ ಶರಣಾದ ಘಟನೆ ಚತ್ತೀಸ್ಗಢದ ಬಸ್ತಾರ್ ವಿಭಾಗದಲ್ಲಿ ನಡೆದಿದೆ.
ಶರಣಾದ ಬಳಿಕ ಮಾತನಾಡಿದ ಉಗ್ರರು, ಜಿಲ್ಲಾ ಪೊಲೀಸರ ಪುನರ್ವಸತಿ ಅಭಿಯಾನದಿಂದ ನಾವು ಪ್ರಭಾವಿತರಾಗಿದ್ದು, ನಮ್ಮ ಮಾವೋವಾದಿ ಸಿದ್ಧಾಂತಗಳು ನಿರಾಶೆ ಮೂಡಿಸಿದೆ ಎಂಬುದಾಗಿ ತಿಳಿಸಿದ್ದಾರೆಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
32 ನಕ್ಸಲರೂ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆ, ಕ್ರಾಂತಿಕಾರಿ ಮಹಿಳಾ ಆದಿವಾಸಿ ಸಂಘಟನೆ, ಚೆಟ್ನಾ ನಾಟ್ಯ ಮಂಡಳಿ ಮತ್ತು ಜನಾತನಾ ಸರ್ಕಾರ ಗ್ರೂಪ್'ಗೆ ಸೇರಿದವರಾಗಿದ್ದಾರೆಂದು ವರದಿಯಾಗಿದೆ.