ಮುಂಬಯಿ,ಅ. 26 (DaijiworldNews/HR): ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಾಳಾ ಠಾಕ್ರೆ ಪರಂಪರೆಯನ್ನು ಮುಂದುವರಿಸುವ ಬದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶರಣಾಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ , ಉದ್ಧವ್ ಠಾಕ್ರೆ ಮರಾಠಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಉದ್ಧವ್ ಠಾಕ್ರೆ ಅವರು ಬಾಳಾ ಸಹಾಬ್ ಠಾಕ್ರೆ ಪರಂಪರೆಯನ್ನು ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಸೋನಿಯಾ ಗಾಂಧಿಯವರಿಗೆ ಶರಣಾಗಿದ್ದು ಅವರ ಆಲೋಚನೆಗಳನ್ನು ಎರವಲು ಪಡೆದುಕೊಂಡಿದ್ದಾರೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಇನ್ನು ಈ ವಿಷಯವನ್ನು ಭಾರತ ದೇಶ ಸಹಿಸದ ಅಧಪತನ, ಉದ್ಧವ್ ಠಾಕ್ರೆ ಅವರು ಹಿಂದೂ ಭಾವನೆಗಳು ಮತ್ತು ಹಬ್ಬಗಳನ್ನು ಅಪಹಾಸ್ಯ ಮಾಡುವ ಮಟ್ಟಕ್ಕೆ ತಲುಪಿದ್ದಾರೆ ಎಂದರು.