ನವದೆಹಲಿ, ಅ.26 (DaijiworldNews/PY): ಸುಪ್ರೀಂ ಕೋರ್ಟ್ ಸೋಮವಾರ ವಿಜಯ ಮಲ್ಯಾರ ಯುಬಿಹೆಚ್ಎಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ನ್ಯಾ. ಯುಯು ಲಲಿತ್ ಅವರಿದ್ದ ಸುಪ್ರೀಂ ಪೀಠವು ವಿಜಯ ಮಲ್ಯಾರ ಯುಬಿಹೆಚ್ಎಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಯುಬಿ ಗ್ರೂಪ್ನ 102 ವರ್ಷಗಳ ಹಳೆಯ ಕಂಪೆನಿ ಮುಚ್ಚುವುದನ್ನು ಉನ್ನತ ನ್ಯಾಯಾಲಯ ತಡೆಗಟ್ಟಿದೆ.
ಎಸ್ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು, ಇದುವರೆಗೆ ಸುಮಾರು 3,600 ಕೋಟಿ ರೂ.ಅನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ 11,000 ಕೋಟಿ ರೂ. ಅನ್ನು ಮಲ್ಯ ಮತ್ತು ಯುಬಿಎಚ್ಎಲ್ನಿಂದ ಪಡೆದುಕೊಳ್ಳಬೇಕಿದೆ ಎಂದು ಉನ್ನತ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.