ನವದೆಹಲಿ, ಅ. 26 (DaijiworldNews/HR): ಭಾರತ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡುವವರನ್ನು ವಿದೇಶಿ ನೆಲದಲ್ಲೂ ನಿಂತು ಎದುರಿಸುವ ತಾಕತ್ತು ಈಗ ನಮ್ಮ ದೇಶಕ್ಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಈ ಕುರಿತು ರಿಷಿಕೇಶದಲ್ಲಿ ಪರಮಾರ್ಥ್ ನಿಕೇತನ್ ಆಶ್ರಮದಲ್ಲಿ ಮಾತನಾಡಿದ ಅವರು, ನಮ್ಮ ಶತ್ರುಗಳನ್ನು ಎದುರಿಸಲು ನಮ್ಮ ನೆಲವೇ ಅಲ್ಲ. ವಿದೇಶಿ ನೆಲದಲ್ಲೂ ನಿಂತು ಹೋರಾಟ ಮಾಡುತ್ತೇವೆ ಎಂದರು
ಇನ್ನು ಎಲ್ಲಿಂದ ನಮಗೆ ಬೆದರಿಕೆ ಬರುತ್ತದೆಯೋ ಅಲ್ಲಿಗೆ ಭಾರತ ಯುದ್ಧವನ್ನು ತೆಗೆದುಕೊಂಡು ಹೋಗುತ್ತದೆ. ಹಾಗೇ ನಮ್ಮ ಭಾರತ ಇಲ್ಲಿಯವರೆಗೂ ಯಾರ ಮೇಲೂ ಮೊದಲಿಗೆ ದಾಳಿ ಮಾಡಿಲ್ಲ. ಆದರೆ ಹೊಸ ಕಾರ್ಯತಂತ್ರದ ಭಾಗವಾಗಿ ಭದ್ರತಾ ಬೆದರಿಕೆಗಳನ್ನು ಎದುರಿಸಲು ನಾವು ತಯಾರಾಗಿದ್ದೇನೆ ಎಂದು ಹೇಳಿದ್ದಾರೆ.