ಪುಣೆ,ಅ. 27 (DaijiworldNews/HR) : ಶಿವಸೇನೆಯ ಸ್ಥಳೀಯ ಘಟಕದ ಮಾಜಿ ಅಧ್ಯಕ್ಷ ರಾಹುಲ್ ಶೆಟ್ಟಿ (43) ಅವರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಲೋನಾವಾಲದಲ್ಲಿ ನಡೆದಿದೆ.
ಈ ಘಟನೆಯು ಸೋಮವಾರ ಬೆಳಗ್ಗೆ 10 ಗಂಟೆ ರಾಹುಲ್ ಲೋನಾವಾಲದ ಜಯಚಂದ್ ಚೌಕ್ನಲ್ಲಿರುವ ತನ್ನ ಚಹಾ ಅಂಗಡಿಯ ಹೊರಗಿದ್ದಾಗ ಸಂಭವಿಸಿದೆ.
ಇನ್ನು ರಾಹುಲ್ ಅವರ ಪತ್ನಿ, ಮಾಜಿ ಕಾರ್ಪೊರೇಟರ್ ಸೌಮ್ಯಾ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳಾದ ಸೂರಜ್ ಅಗರ್ವಾಲ್ ಮತ್ತು ದೀಪಾಲಿ ಭಿಲಾರೆ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಈ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ ರಾಹುಲ್ ಶೆಟ್ಟಿ ಮೇಲೆ ಮೂರು ಸುತ್ತು ಗುಂಡು ಹಾರಿಸಿದನು. ಬಳಿಕ ಇಬ್ಬರೂ ರಾಹುಲ್ ಶೆಟ್ಟಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತ ಪಟ್ಟಿರುವುದಾಗಿ ಎಸ್ಪಿ ಅಭಿನವ ದೇಶ್ಮುಖ್ ತಿಳಿಸಿದ್ದಾರೆ.