ಬೆಂಗಳೂರು, ಅ. 27 (DaijiworldNews/HR): ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ.
ಮುನಿರತ್ನಅವರು ಉಪ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಕಾರಣಕ್ಕಾಗಿ ಮತದಾರರಿಗೆ ಒಂದು ವೋಟಿಗೆ 5 ಸಾವಿರ ಹಣ ನೀಡುವ ಆಮಿಷ ಒಡ್ಡಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮುಖಂಡರು ಆರೋಪಿಸಿ, ಅನೇಕ ಬೆಂಬಲಿಗರ ವಿರುದ್ಧ ಯಶವಂತ ಪುರ ಠಾಣೆಯಲ್ಲಿ ದೂರು ನೀಡಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಇನ್ನು ಕಾಂಗ್ರೆಸ್ ಬಿಜೆಪಿಯ ಅಭ್ಯರ್ಥಿ ವಿರುದ್ಧ ದೂರು ನೀಡಿದ್ರೇ, ಅತ್ತ ಬಿಜೆಪಿ ಕೂಡ ಎಂಎಲ್ ಸಿ ನಾರಾಯಣಸ್ವಾಮಿ ಹೆಚ್ ಎಂ ಟಿ ಲೇಔಟ್ ನಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹ ಮಾಡುತ್ತಿದ್ದಾರೆ ಎಂಬುದಾಗಿ ಆರೋಪಿಸಿ ದೂರು ನೀಡಿದ್ದು, ಅವರ ವಿರುದ್ಧವೂ ಯಶವಂತ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.