ಬೆಂಗಳೂರು, ಅ. 27 (DaijiworldNews/MB) : ''ಆರ್ಆರ್ ನಗರದಲ್ಲಿ ಹಣ ಮತ್ತು ಸೆಟ್ಟಾಪ್ ಬಾಕ್ಸ್ ವಿತರಣೆ ಮಾಡಿದ್ದರೂ ಮೌನವಾಗಿರುವ ಚುನಾವಣಾ ಆಯೋಗ ಕೇವಲ ಬೆದರು ಬೊಂಬೆಯೇ'' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಶಿರಾ ಮತ್ತು ಆರ್ಆರ್ ನಗರ ಉಪಚುನಾವಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ'' ಎಂದು ಹೇಳಿದ್ದು, ''ಬಿಜೆಪಿ ಈಗಾಗಲೇ ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಂಡು ಜನರ ಮೇಲೆ ಪ್ರಭಾವ ಬೀರುತ್ತಿದೆ'' ಎಂದು ದೂರಿದ್ದಾರೆ.
''ಆರ್ಆರ್ ನಗರದಲ್ಲಿ ಹಣ ಮತ್ತು ಸೆಟ್ಟಾಪ್ ಬಾಕ್ಸ್ ವಿತರಣೆ ಮಾಡಿದ್ದರೂ ಚುನಾವಣಾ ಆಯೋಗ ಮೌನವಾಗಿದೆ. ಚುನಾವಣಾ ಆಯೋಗ ಕೇವಲ ಬೆದರು ಬೊಂಬೆಯೇ?'' ಎಂದು ಪ್ರಶ್ನಿಸಿದ್ದಾರೆ.