ನವದೆಹಲಿ, ಅ. 27 (DaijiworldNews/HR): ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ(ಯುಎಪಿಎ) ಅಡಿ ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಘೋಷಣೆ ಮಾಡಿದೆ.
ಮುಂಬೈ ದಾಳಿಕೋರರಲ್ಲಿ ಒಬ್ಬನಾದ ಸಾಜಿದ್ ಮಿರ್ ಸೇರಿದಂತೆ 18 ಜನರನ್ನು ಘೋಷಿತ ಭಯೋತ್ಪದಕರ ಪಟ್ಟಿಗೆ ಸೇರಿಸಲಾಗಿದ್ದು, ಈತನನ್ನು ಪಾಕಿಸ್ತಾನ ಮೂಲದ ಎಲ್ಇಟಿ ಉನ್ನತ ಕಮಾಂಡರ್ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಯೋಜಕರಲ್ಲಿ ಎಂದು ತಿಳಿದು ಬಂದಿದೆ.
ಇನ್ನು ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಮತ್ತು ಇಂಡಿಯನ್ ಮುಜಾಹಿದ್ದೀನ್ನ ಭಟ್ಕಲ್ ಸಹೋದರರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
ಯೂಸುಫ್ ಮುಜಾಮಿಲ್ ಅಲಿಯಾಸ್ ಅಹ್ಮದ್ ಬಾಯಿ, ಹಫೀಸ್ ಸಯೀದ್ನ ಸೋದರ ಮಾವ ಅಬ್ದುರ್ ರೆಹಮಾನ್ ಮಕ್ಕಿ, ಶಾಹಿದ್ ಮೆಹಮೂದ್, ಫರ್ಹಾತುಲ್ಲಾ ಘೋರಿ, ಅಬ್ದುಲ್ ರೌಫ್ ಅಸ್ಘರ್, ಯೂಸುಫ್ ಅಜರ್, ಶಾಹಿದ್ ಲತೀಫ್, ಸೈಯದ್ ಮೊಹಮ್ಮದ್ ಯೂಸುಫ್ ಶಾ, ಗುಲಾಂ ನಬಿ ಖಾನ್, ಜಾಫರ್ ಹುಸೇನ್ ಭಟ್, ರಿಯಾಜ್ ಇಸ್ಮಾಯಿಲ್ ಶಹಬಂದ್ರಿ, ಇಕ್ಬಾಲ್, ಮೊಹಮ್ಮದ್ ಅನಿಸ್ ಶೇಖ್, ಶೇಖ್ ಶಕೀಲ್ ಅಲಿಯಾಸ್ ಛೋಟಾ ಶಕೀಲ್, ಇಬ್ರಾಹಿಂ ಮೆಮನ್, ಜಾವೇದ್ ಚಿಕ್ನಾ ಎಂಬ 18 ಮಂದಿಯನ್ನು'ಘೋಷಿತ' ಭಯೋತ್ಪಾದಕರೆಂದು ಘೋಷಿಸಲಾಗಿದೆ.