ಚಂಡೀಗಢ, ಅ. 28 (DaijiworldNews/MB) : ದೇಶಾದಾದ್ಯಂತ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲ್ಲೇ ಇದ್ದು ನವೆಂಬರ್ 5ರಂದು ದೇಶಾದ್ಯಂತ ರಸ್ತೆ ತಡೆ ನಡೆಸಲು ಹಲವು ರೈತ ಸಂಘಟನೆಗಳು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಕೃಷಿ ಮಸೂದೆ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಮುಖ್ಯಮಂತ್ರಿ
ಈ ಬಗ್ಗೆ ದೆಹಲಿಯಲ್ಲಿ ಮಂಗಳವಾರ ಸಭೆ ನಡೆದಿದ್ದು 500ಕ್ಕೂ ಹೆಚ್ಚು ಸಾಂಸ್ಥಿಕ ಸಂಘಟನೆಗಳನ್ನೊಳಗೊಂಡ ಪ್ರಮುಖ ರೈತ ಸಂಘಟನೆಗಳು, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ರಾಜ್ಯ ಪ್ರತಿನಿಧಿಗಳು, ರೈತ ಮುಖಂಡ ಬಿಕೆಯು(ರಾಜೇವಲ್) ಬಲ್ಬೀರ್ ಸಿಂಗ್ ರಾಜೇವಲ್ ನೇತೃತ್ವದ ಸಂಘಟನೆಗಳು ಮತ್ತು ಹರ್ಯಾಣ ಬಿಕೆಯು ಮುಖ್ಯಸ್ಥ ಗುರ್ನಮ್ ಸಿಂಗ್ ಈ ಸಭೆಯಲ್ಲಿ ಭಾಗಿಯಾಗಿದ್ದರು.
ಈ ಸಭೆಯಲ್ಲಿ ಮೂರು ರೈತ ವಿರೋಧಿ, ಜನ ವಿರೋಧಿ ಕೃಷಿ ಮಸೂದೆ ಮತ್ತು ಉದ್ದೇಶಿತ ವಿದ್ಯುದ್ದೀಕರಣ(ತಿದ್ದುಪಡಿ) ಮಸೂದೆ 2020ನ್ನು ವಿರೋಧಿಸಿ ದೇಶಾದ್ಯಂತ ನವೆಂಬರ್ 5ರಂದು ರಸ್ತೆ ತಡೆ ನಡೆಸಲು ಹಾಗೂ ನವೆಂಬರ್ 26-27ರಂದು ದೆಹಲಿಯಲ್ಲಿ 'ದೆಹಲಿ ಚಲೋ' ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈತ ಮುಖಂಡರು ತಿಳಿಸಿರುವುದಾಗಿ ವರದಿಯಾಗಿದೆ.