ಪಾಟ್ನಾ, ಅ. 28 (DaijiworldNews/MB) : ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮೊದಲ ಹಂತದ 71 ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ''ಈ ಬಾರಿ ನ್ಯಾಯ, ಉದ್ಯೋಗ, ರೈತರಿಗಾಗಿ ಮಹಾಮೈತ್ರಿಗೆ ಮತ ನೀಡಿ'' ಎಂದು ಬಿಹಾರ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ''ನ್ಯಾಯ, ಉದ್ಯೋಗ, ರೈತ ಕಾರ್ಮಿಕರಿಗಾಗಿ ಈ ಬಾರಿ ನಿಮ್ಮ ಮತವು ಮಹಾ ಮೈತ್ರಿಗೆ ಮಾತ್ರ ನೀಡಿ ಎಂದು ಮನವಿ ಮಾಡಿದ್ದು ಬಿಹಾರ ಮತದಾನದ ಮೊದಲ ಹಂತದಲ್ಲಿ ನಿಮ್ಮೆಲ್ಲರಿಗೂ ಶುಭವಾಗಲಿ'' ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಆರ್ಜೆಡಿ ನೇತೃತ್ವದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸ್ಪರ್ಧಿಸುತ್ತಿದೆ.