ಚಿತ್ರದುರ್ಗ, ಅ.28 (DaijiworldNews/PY): ಚುನಾವಣೆಗಳಲ್ಲಿ ಎಲ್ಲಾ ಪಕದಷದವರು ಹಣ, ಸಾರಾಯಿ ಹಂಚುತ್ತಾರೆ. ಇವುಗಳನ್ನು ಮತದಾರರು ಮೂರು ಕಡೆಯಿಂದ ಕೂಡಾ ತೆಗೆದುಕೊಂಡು ಒಬ್ಬರಿಗೆ ಒಬ್ಬರು ಟೋಪಿ ಹಾಕುತ್ತಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಕೊಟ್ಟು ಗೆದ್ದವರು ಪೂರ್ಣವಾದ ಕಾರ್ಯ ಮಾಡುವುದಿಲ್ಲ. ಇದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ರಾಜಕಾರಣ ಬೇಡ ಎಂದೆನಿಸದರೂ ನಾವು ಡ್ರಗ್ ಅಡಿಕ್ಟ್ ಆದಂತಾಗಿದೆ ಎಂದರು.
ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರಭಾವದ ಕಾರಣದಿಂದ ಯತ್ನಾಳ್ ವಿರುದ್ದ ಕ್ರಮ ಕೈಗೊಂಡಿಲ್ಲ. ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಯತ್ನಾಳ್ ಅವರು ನನ್ನ ಬಳಿ ತಿಳಿಸಿದ್ದಾರೆ. ಅಧಿಕಾರದಿಂದ ಸಿಎಂ ಯಡಿಯೂರಪ್ಪ ಅವರನ್ನು ಇಳಿಸುತ್ತಾರೋ ಆಥವಾ ಯಡಿಯೂರಪ್ಪ ಅವರ ಬಳಿಕ ಯತ್ನಾಳ್ ಅವರೇ ಸಿಎಂ ಆಗುತ್ತಾರೋ ತಿಳಿದಿಲ್ಲ. ಆದರೆ. ಯತ್ನಾಳ್ ಅವರ ಪರ ಕೇಂದ್ರದ ಎಲ್ಲಾ ನಾಯಕರಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯು, ಮೂರು ಪಕ್ಷದ ಹೈಕಮಾಂಡ್ಗಳಲ್ಲಿ ಬಲಿಷ್ಠವಾಗಿದೆ. ಯಾರಿಗೂ ಕೂಡಾ ಪ್ರಧಾನಿ ಮೋದಿ ಅವರ ಎದರು ನಿಲ್ಲಲು ಸಾಧ್ಯವಿಲ್ಲ. ಈ ನಡುವೆ ಯತ್ನಾಳ್ ಅವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಆದರೆ, ಯತ್ನಾಳ್ ಅವರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದರೆ ಯತ್ನಾಳ್ ಅವರ ಪರ ಹೈಕಮಾಂಡ್ ಇದೆ ಎಂದರು.