ನವದೆಹಲಿ, ಅ.28 (DaijiworldNews/PY): ಭಾರತೀಯ ವಾಯುಪಡೆಗೆ ಇತ್ತೀಚೆಗೆ ಐದು ರಫೇಲ್ ಯುದ್ದ ವಿಮಾನ ಸೇರ್ಪಡೆಗೊಂಡಿದೆ. ಇದರ ಬೆನ್ನಲ್ಲೇ ನ.3ರಂದು ಪುನಃ ಮೂರು ರಫೇಲ್ ಯುದ್ದ ವಿಮಾನಗಳು ಆಗಮಿಸುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಭಾರತಕ್ಕೆ ಜುಲೈ 26ರಂದು ಫ್ರಾನ್ಸ್ನಿಂದ ಐದು ಯುದ್ದ ವಿಮಾನಗಳು ಹೊರಟಿದ್ದು, ಜುಲೈ 29ರಂದು ಅಂಬಾಲಾ ವಾಯುನೆಲೆಗೆ ಈ ಐದು ರಫೇಲ್ ಯುದ್ದ ವಿಮಾನಗಳು ಬಂದಿಳಿದಿತ್ತು.
ಇದೀಗ ನ.5ರಂದು ಪುನಃ ಮೂರು ರಫೇಲ್ ಯುದ್ದ ವಿಮಾನಗಳು ಅಂಬಾಲಾ ವಾಯುನೆಲೆಗೆ ಬಂದಿಳಿಯಲಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ, ಫ್ರಾನ್ಸ್ನಲ್ಲಿ ಐಎಎಫ್ನ ಏಳು ಮಂದಿ ಪೈಲಟ್ಗಳಿಗೆ ರಫೇಲ್ ಯುದ್ದ ವಿಮಾನ ಹಾರಾಟದ ತರಬೇತಿ ನೀಡಲಾಗಿದೆ ಎಂದು ಹೇಳಲಾಗಿದೆ.
ಮೊದಲ ಬಾರಿಗೆ ಬಂದ ಐದು ರಫೇಲ್ ಯುದ್ದ ವಿಮಾನಗಳು ಸೆ.10ರಂದು ವಾಯುಪಡೆಗೆ ಸೇರ್ಪಡೆಗೊಂಡಿತ್ತು. ಕೇಂದ್ರ ಸರ್ಕಾರವು 2016ರಲ್ಲಿ ಫ್ರಾನ್ಸ್ನೊಂದಿಗೆ ಯುದ್ದ ವಿಮಾನ ಖರೀದಿ ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು.