ಪಣಜಿ, ಅ.28 (DaijiworldNews/PY): ಕೊರೊನಾ ಮಾರ್ಗಸೂಚಿಯ ಅನ್ವಯ ನ.1ರಿಂದ ಕ್ಯಾಸಿನೊಗಳನ್ನು ಪುನಃ ಆರಂಭಿಸಲು ಗೋವಾ ಸಚಿವ ಸಂಪುಟ ಬುಧವಾರ ಅನುಮತಿ ನೀಡಿದೆ.
ಕೊರೊನಾ ಹಿನ್ನೆಲೆ ಕ್ಯಾಸಿನೊಗಳನ್ನು ಮಾರ್ಚ್ ತಿಂಗಳಿನಿಂದ ಮುಚ್ಚಲಾಗಿತ್ತು. ಇದೀಗ ಕೊರೊನಾ ಮಾರ್ಗಸೂಚಿಯ ಅನ್ವಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕ್ಯಾಸಿನೊಗಳನ್ನು ಮತ್ತೆ ಆರಂಭಿಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಸಚಿವ ಸಂಪುಟದ ಬಳಿಕ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಮಾತನಾಡಿ, ''ಸಚಿವ ಸಂಪುಟದಲ್ಲಿ ಕೊರೊನಾ ಮಾರ್ಗಸೂಚಿ ಅನ್ವಯ ಕ್ಯಾಸಿನೊಗಳನ್ನು ಪುನಃ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ'' ಎಂದು ತಿಳಿಸಿದರು.
ಕ್ಯಾಸಿನೊಗಳಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಶೇ.50ರಷ್ಟು ಮಂದಿ ಮಾತ್ರವೇ ಕ್ಯಾಸಿನೊದಲ್ಲಿ ಇರಬೇಕು. ಕ್ಯಾಸಿನೊಗಳನ್ನು ಪುನಃ ಆರಂಭಿಸುವ ಮೊದಲು ಸರ್ಕಾರಕ್ಕೆ ಪರವಾನಗಿ ಶುಲ್ಕ ಪಾವತಿ ಮಾಡಬೇಕು'' ಎಂದರು.