ಪಾಟ್ನಾ, ಅ.28 (DaijiworldNews/PY): ನಮಗೆ ಸುಳ್ಳು ಹೇಳುವುದು ಗೊತ್ತಿಲ್ಲ. ನಮಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುಳ್ಳು ಹೇಳುವ ವಿಚಾರದಲ್ಲಿ ಸ್ಪರ್ಧೆ ಮಾಡಲು ಅಸಾಧ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬುಧವಾರ ಬಿಹಾರದ ವಾಲ್ಮೀಕಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯ ಸಂದರ್ಭ ಮಾತನಾಡಿದ ಅವರು, ಇಲ್ಲಿಯವರೆಗೆ ಕೈ ಪಕ್ಷವು ದೇಶಕ್ಕೆ ನಿರ್ದೇಶನ ನೀಡುತ್ತಾ ಬಂದಿದೆ. ಸಾಲ ಮನ್ನಾ ಮಾಡಿದ್ದೇವೆ, ಉದ್ಯೋಗ ಸೃಷ್ಠಿ ಮಾಡುವುದು ಹಾಗೂ ರೈತರ ಪರ ನಿಲ್ಲುವ ಬಗ್ಗೆ ನಾವು ಕೇಳಿದ್ದೇವೆ. ನಮಗೆ ಸುಳ್ಳು ಹೇಳಲು ಬರುವುದಿಲ್ಲ ಎಂದಿದ್ದಾರೆ.
ರೈತರು ಸೇರಿದಂತೆ ಕಾರ್ಮಿಕರನ್ನು ನಾಶಪಡಿಸುವ ಗುರಿಯನ್ನು ಲಾಕ್ಡೌನ್ ಹಾಗೂ ನೋಟು ರದ್ದತಿ ಹೊಂದಿದ್ದವು. ಇವೆರಡರ ಉದ್ದೇಶ ಒಂದೇ ಆಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರಸ್ತುತ ಭಾಷಣದಲ್ಲಿ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ. ಉದ್ಯೋಹ ಸೃಷ್ಟಿ ವಿಚಾರದಲ್ಲಿ ಸುಳ್ಳು ಹೇಳುತ್ತಿರುವುದು ಅವರಿಗೂ ಗೊತ್ತಿದೆ. ಪ್ರಧಾನಿ ಮೋದಿ ಅವರ ಇಲ್ಲಿಗೆ ಬಂದು ಉದ್ಯೋಗ ನೀಡುವುದಾಗಿ ಹೇಳಿದರೆ, ಅವರನ್ನು ಜನರು ಓಡಿಸುತ್ತಾರೆ ಎನ್ನುವ ವಿಚಾರ ಖಚಿತವಾಗಿದೆ ಎಂದು ಲೇವಡಿ ಮಾಡಿದ್ದಾರೆ.