ಚನ್ನರಾಯಪಟ್ಟಣ, ಅ. 29 (DaijiworldNews/MB) : ದುಷ್ಕರ್ಮಿಗಳು ವ್ಯಕ್ತಿಯೋರ್ವನ ಹತ್ಯೆಗೈದು ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿ, ಪೆಟ್ರೋಲ್ ಸುರಿದು ಕಾರು ಸಮೇತ ಸುಟ್ಟಿರುವ ಘಟನೆ ತಾಲೂಕಿನ ಎಂ.ಹೊನ್ನೇಹಳ್ಳಿ ಬಳಿ ನಡೆದಿದೆ.
ವ್ಯಕ್ತಿಯ ದೇಹವು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಗುರುತು ಸಿಗದಂತಾಗಿದೆ ಎಂದು ವರದಿ ತಿಳಿಸಿದೆ. ಪ್ರಸ್ತುತ ಕಾರಿನ ಚಾಸ್ಸಿ ನಂಬರ್ ಆಧಾರದಲ್ಲಿ ಮಾಲಿಕರ ಪತ್ತೆಗೆ ಪೊಲೀಸರು ಕಾರ್ಯಾಪ್ರವೃತ್ತರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.