ನವದೆಹಲಿ, ಅ. 29 (DaijiworldNews/HR): ಕೊರೊನಾ ಲಸಿಕೆ ಲಭ್ಯವಾದ ಬಳಿಕ ರಾಷ್ಟ್ರದ ಎಲ್ಲಾ ಜನರಿಗೂ ನೀಡಲಾಗುವುದು, ಲಸಿಕೆಯ ವಿತರಣೆಯನ್ನು ನಿರ್ವಹಿಸಲು ಹಾಗೂ ಮಾರ್ಗವನ್ನು ಗುರುತಿಸಲು ರಾಷ್ಟ್ರೀಯ ತಜ್ಞರ ಗುಂಪನ್ನು ರಚಿಸಲಾಗಿದೆ ಎಂಬುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕೊರೊನಾ ಲಸಿಕೆಯನ್ನು ಮೊದಲನೆಯದಾಗಿಅತ್ಯಂತ ದುರ್ಬಲ ಹಾಗೂ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗುವುದು ಎಂದರು.
ಇನ್ನು ಕೊರೊನಾ ಲಸಿಕೆ ತಯಾರಿಕೆಯ ಕೆಲಸ ಇನ್ನೂ ಪ್ರಗತಿಯಲ್ಲಿದ್ದು, ಟ್ರಯಲ್ಸ್ಗಳು ನಡೆಯುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಕೋವಾಕ್ಸಿನ್ ಹಾಗೂ ಝಿಡಸ್ ಕಾಡಿಲಾ ಸಹಿತ ಎರಡು ಲಸಿಕೆಗಳು ಕ್ಲಿನಿಕಲ್ ಟ್ರಯಲ್ನಲ್ಲಿದ್ದು, ಭಾರತವು ಆಕ್ಸ್ಫರ್ಡ್-ಅಸ್ಟ್ರಾಝೆನಿಕಾ ಕೊರೋನ ವೈರಸ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್ನ್ನು ನಡೆಸುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.