ತುಮಕೂರು, ಅ. 29 (DaijiworldNews/MB) : ''ಅನ್ನ ತಿನ್ನುವ ಎಲ್ಲರೂ ರೈತರು, ದಲಿತರು, ಕಾರ್ಮಿಕರ ವಿರೋಧಿಯಾದ ಮಸೂದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವ ಬಿಜೆಪಿಯ ವಿರುದ್ದವಾಗಿ ಮತ ಹಾಕಬೇಕು'' ಎಂದು ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ಪ್ರಕಾಶ್ ಕಮ್ಮರಡಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿರುವ ಅವರು, ''ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ರೈತ, ಕಾರ್ಮಿಕ ಹಾಗೂ ದಲಿತ ವಿರೋಧಿ ನೀತಿಯಿಂದಾಗಿ ದೇಶದಲ್ಲಿ ಜನರನ್ನು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈವರೆಗೂ ನಾವು ಈ ಜನ ವಿರೋಧಿ ನೀತಿಗಳ ವಿರುದ್ದ ನಡೆಸಿರುವ ಹೋರಾಟವು ಈ ಚುನಾವಣೆ ಸಂದರ್ಭದಲ್ಲಿ ಮತವಾಗಿ ಪರಿವರ್ತನೆಯಾಗಬೇಕು. ಬಿಜೆಪಿ ಜನರಿಗೆ ಮಾಡಿರುವ ಅನ್ಯಾಯವನ್ನು ಜನರು ಮನಗಾಣಬೇಕು'' ಎಂದು ಹೇಳಿದ್ದಾರೆ.
''ರೈತರಿಗೆ ಮರಣ ಶಾಸನವಾಗಿರುವ ಈ ಕಾಯ್ದೆಗಳನ್ನು ಜಾರಿಗೆ ತರಬಾರದೆಂದಾಗಿ ಜನರು ಅದರಲ್ಲೂ ಮುಖ್ಯವಾಗಿ ರೈತ, ದಲಿತ, ಕಾರ್ಮಿಕರು ಬಿಜೆಪಿಗೆ ವಿರುದ್ದವಾಗಿ ಮತ ಹಾಕಬೇಕು'' ಎಂದು ವಿನಂತಿಸಿದ್ದಾರೆ.