ನವದೆಹಲಿ, ನ.03 (DaijiworldNews/PY): ವಿಯೆನ್ನಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆಘಾತ ವ್ಯಕ್ತಪಡಿಸಿದ್ದು, "ವಿಯೆನ್ನಾದೊಂದಿಗೆ ಭಾರತ ಇದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ವಿಯೆನ್ನಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ತೀವ್ರ ಆಘಾತ ಹಾಗೂ ದುಃಖವಾಗಿದೆ. ಈ ದುರಂತದ ಸಮಯದಲ್ಲಿ ಭಾರತ ಆಸ್ಟ್ರೀಯಾದೊಂದಿಗೆ ನಿಂತಿದೆ. ನನ್ನ ಆಲೋಚನೆಗಳು ಮೃತರ ಹಾಗೂ ಅವರ ಕುಟುಂಬದೊಂದಿಗಿದೆ" ಎಂದು ಹೇಳಿದ್ದಾರೆ.
ವಿಯೆನ್ನಾದ ಆರು ಕಡೆಗಳಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯ ಪರಿಣಾಮ ಇಬ್ಬರು ಮೃತಪಟ್ಟಿದ್ದ, 15 ಮಂದಿ ಗಾಯಗೊಂಡಿದ್ದಾರೆ. ಹಿಲ್ಟನ್ ಹೋಟೆಲ್ನಲ್ಲಿರುವ ಪ್ರವಾಸಿಗರನ್ನು ಈ ಉಗ್ರರ ತಂಡ ಬಂಧಿಯಾಗಿರಿಸಿದೆ ಎನ್ನಲಾಗಿದೆ. ಆಸ್ಟ್ರಿಯಾ ಸರ್ಕಾರವು ಸೇನೆಯನ್ನು ಕಳುಹಿಸಿದೆ. ಸದ್ಯ ವಿಯೆನ್ನಾ ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.