ನವದೆಹಲಿ, ನ. 04 (DaijiworldNews/MB) : ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಸೇರಿದಂತೆ ಮೂವರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ದೆಹಲಿಯ ರೋಹಿಣಿ ಜಿಲ್ಲೆಯಲ್ಲಿ ನಡೆದಿದ್ದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೋಗಿಯೊಂದಿಗೆ ಬಂದಿದ್ದ ಮಹಿಳೆಯೋರ್ವರು ವಿಶ್ರಾಂತಿ ಕೊಠಡಿಯಲ್ಲಿ ವಿಶ್ರಮಿಸುತ್ತಿದ್ದು ಸಂದರ್ಭದಲ್ಲಿ ಅಲ್ಲಿಗೆ ಬಂದ ಸೆಕ್ಯುರಿಟಿ ಗಾರ್ಡ್ ಮಹಿಳೆಯಲ್ಲಿ ರೋಗಿಯ ವಿವರವನ್ನು ಕೇಳಿದ್ದಾನೆ. ಮಹಿಳೆಯು ಅಧಿಕ ಮಾಹಿತಿ ನೀಡಲು ನಿರಾಕರಿಸಿದ ಸಂದರ್ಭ ಆಕೆಯ ತಪಾಸಣೆ ನೆಪದಲ್ಲಿ ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದ ಗಾರ್ಡ್ ಆಸ್ಪತ್ರೆಯ ಮಾಜಿ ಬೌನ್ಸರ್ಗಳಾದ ಪ್ರವೀಣ್ ಹಾಗೂ ಮನೀಶ್ ಜೊತೆ ಸೇರಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ''ಮಹಿಳೆ ತನ್ನ ಸ್ನೇಹಿತರೊಂದಿಗೆ ಪೊಲೀಸ್ ಠಾಣೆಗೆ ಬಂದು ಅತ್ಯಾಚಾರ ನಡೆದ ಬಗ್ಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದೇವೆ'' ಎಂದು ತಿಳಿಸಿದ್ದಾರೆ.
ಇನ್ನು ಈ ಇಬ್ಬರು ಬೌನ್ಸರ್ಗಳನ್ನು ಆಸ್ಪತ್ರೆಯ ಕೆಲಸದಿಂದ ವಜಾ ಮಾಡಲಾಗಿದ್ದರೂ ಕೂಡಾ ಅವರು ಆಸ್ಪತ್ರೆಗೆ ಬರುತ್ತಿದ್ದರು ಎಂದು ವರದಿ ತಿಳಿಸಿದೆ. ಘಟನೆಯ ಬಳಿಕ ಸೆಕ್ಯುರಿಟಿ ಗಾರ್ಡ್ನ್ನು ಕೂಡಾ ಕೆಲಸದಿಂದ ತೆಗೆದುಹಾಕಲಾಗಿದೆ.