ನವದೆಹಲಿ,ನ. 04 (DaijiworldNews/HR): ಒಂಬತ್ತು ಲಕ್ಷಕ್ಕಿಂತ ಹೆಚ್ಚು ಸಬ್ ಸ್ಕ್ರೈಬರ್ಸ್ ಹೊಂದಿದ್ದ ಜನಪ್ರಿಯ ಯೂಟ್ಯೂಬರೊಬ್ಬ ತನ್ನ ಪ್ರೇಯಸಿಯ ಸಹೋದರನನ್ನೇ ಹತ್ಯೆಗೈದ ಆರೋಪದಲ್ಲಿ ಬಂಧಿತನಾಗಿದ್ದಾನೆ.
ಬಂಧಿತ ಆರೋಪಿಯನ್ನು ನೊಯ್ಡಾದ ನಿಜಾಮುಲ್ ಖಾನ್ (26) ಎಂದು ಗುರುತಿಸಲಾಗಿದೆ.
ನಿಜಾಮುಲ್ ಖಾನ್ ಬೈಕ್ ಸ್ಟಂಟರ್ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ತೆರೆದು ಪ್ರಸಿದ್ದಿಯಾಗಿದ್ದ.
ಇನ್ನು ಆರೋಪಿಯು ಕಮಲ್ ಶರ್ಮಾ ಎಂಬಾತನ ಸಹೋದರಿಯನ್ನು ಪ್ರೀತಿಸುತ್ತಿದ್ದು, ಇದಕ್ಕೆ ಕಮಲ್ ವಿರೋದಿಸಿ ನಿಜಾಮುಲ್ ಖಾನ್ ಗೆ ಥಳಿಸಿ, ತಂಗಿಯ ಮೊಬೈಲ್ ಫೋನನ್ನು ಕೂಡ ಕಿತ್ತುಕೊಂಡಿದ್ದ. ಇದರಿಂದ ಕೋಪಗೊಂಡ ನಿಜಾಮುಲ್ ಸ್ನೇಹಿತರೊಂದಿಗೆ ಸೇರಿ ಕಮಲ್ ಶರ್ಮಾನನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಕಮಲ್ ಶರ್ಮಾನ ಸಹೋದರ ನರೇಶ್ ಶರ್ಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಬಳಿಕ ತನಿಖೆಯ ವೇಳೆ ನಿಜಾಮುಲ್ ತನ್ನ ಸ್ನೇಹಿತರಾದ ಸುಮೀತ್ ಮತ್ತು ಅಮೀತ್ ನನ್ನು ಕೊಲೆ ಕೃತ್ಯದಲ್ಲಿ ಭಾಗಿಯಾಗಿಸಿದ್ದೆ ಎಂದು ತಿಳಿಸಿದ್ದಾನೆ.