ಬೆಂಗಳೂರು, ಫೆ02(SS): ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನುವಂತೆ ಕುಮಾರಸ್ವಾಮಿ ಲೇಔಟ್ ಠಾಣೆಯ 71 ಸಿಬ್ಬಂದಿಯನ್ನು ಒಂದೇ ಬಾರಿ ವರ್ಗಾವಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರ ಮೇಲೆ ಪೊಲೀಸರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಸಬ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಬಿಟ್ಟು ಎಲ್ಲಾ ಸಿಬ್ಬಂದಿಯನ್ನು ಅಣ್ಣಾಮಲೈ ವರ್ಗಾವಣೆ ಮಾಡಿದ್ದಾರೆ.
ಠಾಣೆಯ ಒಳಗಡೆ ಜಗಳ ನಡೆದಾಗ 3-4 ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದು ಸಾಮಾನ್ಯ. ಆದರೆ, ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನುವಂತೆ ಅಣ್ಣಾಮಲೈ ಎಲ್ಲಾ 71 ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಠಾಣೆಯಲ್ಲಿ ಗುಂಪುಗಾರಿಕೆ ಮಾಡುವ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ್ದಾರೆ ಎನ್ನುವ ಮಾತು ಪೊಲೀಸ್ ವಲಯದಲ್ಲಿ ಕೇಳಿ ಬಂದಿದೆ.
ವರ್ಗಾವಣೆ ವಿಚಾರ ತಿಳಿದು ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವು
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಜನವರಿ 20ರಂದು ನಡೆದ ಘಟನೆಯ ಸಂಬಂಧ ಇಬ್ಬರನ್ನು ಅಮಾನತು ಮಾಡಲಾಗಿದೆ. ಒಂದೇ ಬಾರಿಗೆ ವರ್ಗಾವಣೆಗೊಂಡ ವಿಚಾರ ತಿಳಿದು ಹೆಡ್ ಕಾನ್ಸ್ಟೇಬಲ್ ನಡಾಫ್ (52) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.