ಶಿರಸಿ,ಫೆ 6 (MSP): ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಣ್ಣನ ಜತೆ ತಂಗಿ ಬರುತ್ತಿದ್ದಾಳೆ. ಯಾಕೆಂದರೆ ರಾಹುಲ್ ಗಾಂಧಿ ಜತೆ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನ ಕೊನೆಯ ಚುನಾವಣ ಅಸ್ತ್ರವಾಗಿದೆ ಎಂದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಎಲ್ಲರ ಬಂಡವಾಳವೂ ಬಯಲಾಗಿದೆ. ಇನ್ನೇನೂ ಈಕೆಯ ಬಂಡವಾಳವೂ ಬಯಲಾಗಲಿದೆ ಅಲ್ಲಿಗೆ ಕಾಂಗ್ರೆಸ್ ಮಹಾಭಾರತದ ಕಥೆ ಮುಗಿಯುತ್ತದೆ.
ಕಾಂಗ್ರೆಸ್ ನೆಹರೂ ಕುಟುಂಬದ ಹೊರತಾಗಿ ಯಾರನ್ನೂ ಒಪ್ಪಲಾರದು, ಕಾಂಗ್ರೆಸ್ ಭ್ರಷ್ಟಾಚಾರದ ಕೂಪ, ಭ್ರಷ್ಟಾಚಾರದಲ್ಲಿ ನಿರಂತರ ದಾಖಲೆಗಾಗಿ ಕಾಂಗ್ರೆಸ್ ಸರಕಾರಕ್ಕೆ ನೊಬೆಲ್ ಪ್ರಶಸ್ತಿ ನೀಡಬೇಕು . ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಕಡೆ ಕಾಂಗ್ರೆಸ್ ರಾಷ್ಟ್ರದ್ರೋಹಿಗಳನ್ನು ಇಟ್ಟಿದೆ ಎಂದು ಕಿಡಿಕಾರಿದರು.