ಬೆಂಗಳೂರು, ಫೆ 06(SM): ಬಜೆಟ್ ಅಧಿವೇಶನದ ಮೊದಲ ದಿನವಾದ ಮಂಗಳವಾರದಂದು ಸದನಕ್ಕೆ ಎಂಟು ಕಾಂಗ್ರೆಸ್ ಶಾಸಕರು ಗೈರಾಗಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಹಾಗೂ ಗೈರಾಗಿರುವ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಫೆಬ್ರವರಿ 8 ರಂದು ಅಧಿವೇಶನಕ್ಕೆ ಎಲ್ಲ ಶಾಸಕರು ಖಡ್ಡಾಯವಾಗಿ ಹಾಜರಾಗಬೇಕು. ಇಲ್ಲದಿದ್ದರೆ ಸದಸ್ಯತ್ವ ರದ್ದು ಮಾಡಲಾಗುವುದು ಎಂದು ಖಡ್ಡಕ್ಕಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 8ರಂದು ಎಲ್ಲ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಖಡ್ಡಾಯವಾಗಿ ಸದನಕ್ಕೂ ಮುನ್ನ ನಡೆಯುವ ಕಾಂಗ್ರೆಸ್ ಸಭೆಗೆ ಹಾಗೂ ಸದನಕ್ಕೆ ಖಡ್ಡಾಯವಾಗಿ ಹಾಜರಾಗಬೇಕು ಎಂದು ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ.
ಒಂದಿಬ್ಬರು ಶಾಸಕರು ಬಿಜೆಪಿಯ ಆಮಿಷಕ್ಕೆ ಬಲಿಯಾಗಿದ್ದಾರೆ. ಅವರಿಗೆ ಈಗಲೂ ಅವಕಾಶವಿದೆ. ಅವರು ತಮ್ಮ ನಿರ್ಣಯ ಬದಲಾಯಿಸಿಕೊಳ್ಳಬಹುದು ಎಂಬುವುದಾಗಿ ಹೇಳಿರುವ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಅವಕಾಶ ನೀಡಿದ್ದಾರೆ.