ನವದೆಹಲಿ, ಫೆ 12 (MSP): ರಾಷ್ಟ್ರ ರಾಜಧಾನಿ ನವದೆಹಲಿಯ ಕರೋಲ್ ಬಾಗ್ ಏರಿಯಾದ ಹೋಟೆಲ್ವೊಂದರಲ್ಲಿ ಮಂಗಳವಾರ ಬೆಳ್ಳಂಬೆಳ್ಳಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಅರ್ಪಿತ್ ಪ್ಯಾಲೇಸ್ ಹೋಟೆಲ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಲ್ಲದೆ ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಹೋಟೆಲ್ ಆವರಿಸಿದೆ. ಬೆಳಗಿನ ಜಾವ ಅಗ್ನಿ ದುರಂತ ನಡೆದಿದ್ದರಿಂದ ಬಹುತೇಕ ನಿದ್ದೆಯ ಮಂಪರಿನಲ್ಲಿದ್ದರು. ಹೊಟೆಲ್ ನಲ್ಲಿದ್ದ ಸಿಬ್ಬಂದಿಗಳನ್ನು ಒಳಗೊಂಡತೆ ಹಲವಾರು ಜನ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ.
ಮೊದಲಿಗೆ ಹೋಟೆಲ್ ನ ೪ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅದೌ ಎರಡನೇಮಹಡಿಯವರೆಗೆ ಹಬ್ಬಿದೆ ಬೆಂಕಿ ಹಬ್ಬಿದೆ. ಬೆಂಕಿ ಅವಘಡದಿಂದ ಮೊದಲ ಅಂತಸ್ತು ಹಾಗೂ ನೆಲಮಹಡಿ ಸುರಕ್ಷಿತವಾಗಿದೆ. ಘಟನೆಯ ಪರಿಣಾಮ ಬೆಳಗ್ಗಿನ ಜಾವ 7 ಗಂಟೆಯವರೆಗೂ ಗಾಢವಾದ ಹೊಗೆ ಆವರಿಸಿತ್ತು. ಘಟನೆಯಿಂದ 35 ಮಂದಿಯನ್ನು ರಕ್ಷಿಸಿದ್ದು, ಗಾಯಾಳುಗಳನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಟ್ಟವಾಗಿ ಆವರಿಸಿಕೊಂಡಿರುವ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೇ ಹಲವರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ್ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೋಟೆಲ್ನಲ್ಲಿ ಶೋಧ ಕಾರ್ಯಾಚಾರಣೆ ಮುಂದುವರಿಸಲಾಗಿದ್ದು ಹೋಟೆಲ್ ನಲ್ಲಿ ಇನ್ನುಷ್ಟು ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.