ಮಂಡ್ಯ,ಫೆ 17(MSP): ಹುತಾತ್ಮ ಯೋಧ ಗುರುವಿನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಚಿತ್ರನಟ ಪ್ರಕಾಶ್ ರೈಗೆ ಸ್ಥಳದಲ್ಲಿ ನೆರೆದಿದ್ದ ಕೆಲವು ದುಷ್ಕರ್ಮಿಗಳು, ಗೂಸಾ ನೀಡಿದ ಘತನೆ ಮೆಳ್ಳಹಳ್ಳಿಯ ಅಂತ್ಯಕ್ರಿಯೆ ಸ್ಥಳದಲ್ಲಿ ನಡೆದಿದೆ.
ಮೃತಯೋಧ ಗುರು ಅವರ ಅಂತಿಮ ದರ್ಶನ ಪಡೆಯಲು ಪ್ರಕಾಶ್ ರೈ ಸಂಜೆ ತನಕ ಅಲ್ಲಿದ್ದರು.ಆದರೆ ಬಳಿಕ ಕೆ.ಎಂ.ದೊಡ್ಡಿ ಬಳಿ ನಟ ಪ್ರಕಾಶ್ ಅವರು ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ, ಈ ರೀತಿಯ ದಾಳಿ - ದಬ್ಬಾಳಿಕೆಗಳು ನಡೆದಾಗ ನಮ್ಮ ನಡುವಿನಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಯಾಗಿ ನಿಂತು, ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂದರು. ಈ ವೇಳೆ ನೆರೆದಿದ್ದ ಸಾರ್ವಜನಿಕರ ಮಧ್ಯೆ ವ್ಯಕ್ತಿಯೋರ್ವರು, ಈ ರೀತಿಯ ಘಟನೆ ನಡೆದಾಗ ನೀವು ಸೈನಿಕರ ಪರ ಮಾತನಾಡಿ, ಬೇರೆ ಸಂದರ್ಭ ದಿನಂಪ್ರತಿ ಸೈನಿಕರ ವಿರುದ್ಧವಾಗಿ ಮಾತನಾಡುತ್ತೀರಲ್ಲ ಎಂದರು. ಇದೇ ವೇಳೆ ಇದಕ್ಕೆ ಹಲವು ಮಂದಿ ದನಿಗೂಡಿಸಿದರು. ಈ ವೇಳೆ ಗದ್ದಲದ ವಾತಾವರಣ ನಿರ್ಮಾಣ ಮಾಡಿ, ಅವರ ಮುಂದೆ ಹಲ್ಲೆ ಗೆ ಮುಂದಾಗಿ ನೀನೊಬ್ಬ ದೇಶದ್ರೋಹಿ, ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ಹಲ್ಲೆಯಿಂದ ಸ್ಥಳದಲ್ಲೇ ಕೆಳಗೆ ಕುಸಿದು ಬಿದ್ದ ಪ್ರಕಾಶ್ ರೈ ಅವರನ್ನು ಪೊಲೀಸರು ರಕ್ಷಿಸಿದರು.
ಆ ಬಳಿಕ ಸುರಕ್ಷಿತವಾಗಿ ರೈ ಅವರನ್ನು ಕಾರು ಹತ್ತಿಸಿ ಅಲ್ಲಿಂದ ಕಳುಹಿಸಿದರು. ಅಚಾನಕ್ಕಾಗಿ ನಡೆದ ಘಟನೆಯಿಂದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.