ನವದೆಹಲಿ,ಫೆ 22(MSP): ಇತ್ತೀಚೇಗೆ ನಡೆದ ಪುಲ್ವಾಮ ದಾಳಿ ವಿರುದ್ದ ದೇಶದಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದ್ರೆ, ಇಲ್ಲೊಂದು ಆಹಾರ ಮಳಿಗೆಯ ಮಾಲೀಕ ವಿಶೇಷ ರೀತಿಯಲ್ಲಿ ತಮ್ಮ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅದೇನೆಂದರೆ ಅವರಲ್ಲಿ, ಒಂದು ಚಿಕನ್ ಲೆಗ್ ಪೀಸ್, ಚಿಕನ್ ತಂದೂರಿಯನ್ನು ಕೊಂಡುಕೊಂಡರೆ 10 ರೂ. ಡಿಸ್ಕೌಂಟ್ ನೀಡುತ್ತಿದ್ದಾರೆ. ಅರೆ ಇದು ಹೇಗೆ ಅಂದ್ಕೋಬೇಡಿ ಇದಕ್ಕೊಂದು ಷರತ್ತನ್ನು ಅವರು ಹಾಕಿದ್ದಾರೆ. ಅದೇನೆಂದರೆ 'ಪಾಕಿಸ್ತಾನ ಮುರ್ದಾಬಾದ್' ಎಂದು ಒಮ್ಮೆ ಗ್ರಾಹಕರು ಘೋಷಣೆ ಕೂಗಿದ್ರೆ ಸಾಕು ಅಲ್ಲಿ ಗ್ರಾಹಕರಿಗೆ 10 ರೂ. ಕಡಿಮೆ ದರದಲ್ಲಿ ಚಿಕನ್ ಲೆಗ್ ಪೀಸ್, ತಂದೂರಿ ದೊರೆಯುತ್ತದೆ.
ಈ ಆಹಾರ ಮಳಿಗೆಯ ಮಾಲೀಕ ಅಂಜಲ್ ಸಿಂಗ್ ಪ್ರಕಾರ ಫೆಬ್ರವರಿ 14ರಂದು ನಡೆದ ಉಗ್ರರ ದಾಳಿಗೆ ಪಾಕಿಸ್ತಾನದ ಕುಮ್ಮಕ್ಕು ಕಾರಣ. ಪಾಕಿಸ್ತಾನ ಮಾನವೀಯತೆಗೆ ಎಂದೂ ಬೆಲೆ ನೀಡಿಲ್ಲ ಅದು ಎಂದೂ ಕೊಡುವುದೂ ಇಲ್ಲ. ಹೀಗಾಗಿ, ಎಲ್ಲರೂ ತಮ್ಮ ಹೃದಯದಲ್ಲಿ ಪಾಕಿಸ್ತಾನ ಮುರ್ದಾಬಾದ್ ಎಂದು ಹೇಳಬೇಕು'' ಎಂದು ಸಿಂಗ್ ಬಯಸಿದ್ದಾರೆ.
ಫೆಬ್ರವರಿ 14ರಂದು ನಡೆದ ದಾಳಿಯಲ್ಲಿ 4೪ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ದಾಳಿಯನ್ನು ತಾನೇ ನಡೆಸಿದ್ದು ಎಂದು ಪಾಕ್ ಮೂಲದ ಜೈಷ್ - ಎ - ಮೊಹಮ್ಮದ್ ಹೊಣೆ ಹೊತ್ತುಕೊಂಡಿತ್ತು. ಈ ದುಷ್ಕೃತ್ಯದ ಬಳಿಕ ಪಾಕಿಸ್ತಾನದ ವಿರುದ್ಧ ಭಾರತದ ಜನತೆಯಲ್ಲಿ ದ್ವೇಷ ಹೆಚ್ಚಾಗುತ್ತಿದೆ. ರಸ್ತೆಗಿಳಿದು ಸಹ ದೇಶದ ಅಸಂಖ್ಯಾತ ಜನರು ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.