ಚುರು, ಫೆ 26(MSP): ದೇಶಕ್ಕಿಂತ ಮಿಗಿಲೂ ಯಾವುದು ಇಲ್ಲ. ದೇಶವನ್ನು ಎಂದಿಗೂ ತಲೆತಗ್ಗಿಸಲು ಬಿಡಲ್ಲ ನಮ್ಮ ದೇಶ ಸುರಕ್ಷಿತರ ಕೈಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಾಕ್ ಮೇಲೆ ಏರ್ ಸ್ಟ್ರೈಕ್ ನಡೆದ ಬಳಿಕ ರಾಜಸ್ಥಾನದ ಚುರುವಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2014 ರಲ್ಲಿ ತಾವು ಚುರುವಿನಲ್ಲಿ ಹೇಳಿದ್ದ ಮಾತುಗಳನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ನಾನು ಯಾವತ್ತೂ ದೇಶ ತಲೆ ತಗ್ಗಿಸಲು ಬಿಡಲ್ಲ. ಭಾರತ ದೇಶ ಸುರಕ್ಷಿತವಾದ ಕೈಯಲ್ಲಿದೆ. ಇದಕ್ಕೆ ಕಾರಣ ನಮ್ಮ ದೇಶವನ್ನು ಯೋಧರು ಕಾಯುತ್ತಿದ್ದಾರೆ ಎಂದು ಭರವಸೆ ನೀಡಿದರು.
ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಬೆದರಿಕೆ ಒಡ್ಡಿದರೆ ಯಾರೂ ಹೆದರಲ್ಲ ಎಂದು ಪಾಕ್ ಗೆ ಮಾತಿನಲ್ಲೇ ಛಾಟಿಯೇಟು ನೀಡಿದ ಪ್ರಧಾನಿ ನಾವೆಲ್ಲರೂ ನಮ್ಮ ಯೋಧರಿಗೆ ನಮನ ಸಲ್ಲಿಸೋಣ ಎಂದು ಹೇಳಿದರು.