ಶ್ರೀನಗರ,ಮಾ 02(AZM):: ಉಗ್ರರು ದಾಳಿ ಮಾಡಿ 40 ಭಾರತೀಯ ಯೋಧರನ್ನು ಬಲಿ ಪಡೆದಿದ್ದ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಮತ್ತೆ ಬಾಂಬ್ ಸ್ಫೋಟವಾಗಿದ್ದು, ಓರ್ವ ನಾಗರಿಕನಿಗೆ ಗಾಯವಾಗಿದೆ.
ಇಂದು ನಸುಕಿನ ಜಾವ ಸುಮಾರು ೩ ಗಂಟೆಗೆ ಮಿಲಿಟರಿಯನ್ನು ಟಾರ್ಗೆಟ್ ಮಾಡಿ ಬಾಂಬ್ ಸ್ಪೋಟಿಸಲಾಗಿದೆ. ಪಾಪಿ ಪಾಕಿಸ್ತಾನ ಮತ್ತೇ ಬಾಂಬ್ ಸ್ಪೋಟ ಮಾಡುವ ಮೂಲಕ ತನ್ನ ಕುತಂತ್ರವನ್ನು ತೋರಿಸುತ್ತಿದೆ. ಅಲ್ಲದೆ ಇನ್ನೊಂದು ಕಡೆ ಪಾಕಿಸ್ತಾನ ಭಾರತದ ಸೈನಿಕರ ಹತ್ಯೆಗೆ ಸಂಚು ಮಾಡಿದ್ದು, ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಕುತಂತ್ರ ಮಾಡಿದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.
ಪಾಕಿಸ್ತಾನ ಸೇನಾ ಶಿಬಿರಗಳಲ್ಲಿರುವ ಆಹಾರ ಡಿಪೋದಲ್ಲಿ ವಿಷ ಬೆರೆಸಲು ಪಿತೂರಿ ಮಾಡಿದ್ದು, ಇದನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸೇರಿ ಸಂಚು ರೂಪಿಸಿದೆ ಎಂದು ಹೇಳಲಾಗುತ್ತಿದೆ. ಕಾಶ್ಮೀರದಲ್ಲಿರುವ ಭಯೋತ್ಪಾದಕರು ವಿಷ ಬೆರೆಸಬಹುದು ಎಂದು ಪಡಿತರ ಡಿಪೋಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.