ಬಿಹಾರ, ಮಾ03 (AZM):ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ಇಂದು ಟೀಕಾ ಪ್ರಹಾರ ನಡೆಸಿದ್ದು,. ಭಯೋತ್ಪಾದಕ ತರಬೇತಿ ಶಿಬಿರದ ಮೇಲಿನ ವಾಯುದಾಳಿ ಬಳಿಕವೂ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷದವರು ತಮ್ಮ ಹೇಳಿಕೆಯ ಮೂಲಕ ಪಾಕಿಸ್ತಾನವನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಹೇಳಿದ್ಧಾರೆ.
ಬಿಹಾರದ ಪಾಟ್ನಾದಲ್ಲಿ ನಡೆದ ನ್ಯಾಷನಲ್ ಡೆಮೋಕ್ರಾಟಿಕ್ ಅಲೆಯನ್ಸ್ (ಎನ್ ಡಿಎ) ಸಮಾವೇಶವನ್ನು ಉದ್ದೇಶಿಸಿ ಅವರು ಈ ಕುರಿತು ಮಾತಾಡಿದರು. 'ನಾನು ಭಯೋತ್ಪಾದನೆಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದೇನೆ ಆದರೆ ವಿರೋಧಿಗಳು ನನ್ನನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕುತ್ತಿವೆ.' ಇದು ವಿರೋಧ ಪಕ್ಷಗಳ ಮಹಾಘಟಬಂಧನ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷಗಳು ಮೊನ್ನೆ ನಡೆದ ಏರ್ ಸ್ಟ್ರೈಕ್ ನ ಪುರಾವೆಗಳನ್ನು ಕೇಳುತ್ತಿವೆ, ಭಾರತೀಯ ಸೇನೆಯಲ್ಲಿನ ಸೈನಿಕರ ಆತ್ಮಬಲವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ವಿರೋಧ ಪಕ್ಷಗಳು ಶತ್ರುರಾಷ್ಟ್ರಗಳ ಬಲ ಹೆಚ್ಚುವಂತೆ ಮಾಡಲು ಹೊರಟಿದ್ದಾರೆಯೆ? ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.