ಬೆಂಗಳೂರು,ಮಾ.07(AZM):ಫೈನಾನ್ಸ್ ನಿಂದ ಲೋನ್ ಪಡೆದು ಮರುಪಾವತಿಸಲಾಗಿಲ್ಲ ಎನ್ನುವ ಕಾರಣಕ್ಕಾಗಿ, ಲೋನ್ ಪಡೆದ ವ್ಯಕ್ತಿಯ ತಂಗಿಯನ್ನು ಕಳುಹಿಸುವಂತೆ ಫೈನಾನ್ಸರ್ ಕಿರುಕುಳ ನೀಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೊಂದ ಮಹಿಳೆ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಹೋದರ ಶೇರ್ ಮಾರ್ಕೆಟ್ ಬಿಸ್ನೆಸ್ ಮ್ಯಾನ್ ಆಗಿದ್ದು, ಲೋನ್ ಪಡೆದು ನಷ್ಟ ಅನುಭವಿಸಿದ್ದರು. ಈ ಹಿನ್ನಲೆ ಅವರಿಗೆ ಲೋನ್ ಅನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆ ಫೈನಾನ್ಸ್ ಕಂಪೆನಿಯ ಮಾಲಕ ಆತನ ತಂಗಿಯನ್ನು ಕಳುಹಿಸು ಎಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಪ್ರಕರಣದ ಕುರಿತಂತೆ ಕಂಪೆನಿ ಮಾಲಕನ ವಿರುದ್ಧ ಹುಲಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.