ನವದೆಹಲಿ, ಮಾ 10(SM): ಹಲವು ದಿನಗಳಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ ದಿನಾಂಕ ಪ್ರಕಟಕೊಂಡಿದೆ. ಏಪ್ರಿಲ್ 11ರಿಂರ ಚುನಾವಣಾ ಸಮರ ಆರಂಭವಾಗಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಹಾಗೂ 23ರಂದು ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ 18ರಂದು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 18 ಹಾಗೂ 23ರಂದು ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆಯುವ ಮತದಾನದ ವಿವರ:
ಉಡುಪಿ-ಚಿಕ್ಕಮಗಳೂರು
ದಕ್ಷಿಣ ಕನ್ನಡ
ಹಾಸನ
ಚಿತ್ರದುರ್ಗ
ತುಮಕೂರು
ಮಂಡ್ಯ
ಮೈಸೂರು
ಚಾಮರಾಜನಗರ
ಬೆಂಗಳೂರು ಗ್ರಾಮಾಂತರ
ಬೆಂಗಳೂರು ನಾರ್ತ್
ಬೆಂಗಳೂರು ಸೆಂಟ್ರಲ್
ಬೆಂಗಳೂರು ಸೌತ್
ಚಿಕ್ಕಬಳ್ಳಾಪುರ
ಕೊಲಾರ
ಕರ್ನಾಟಕ ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ನಡೆಯುವ ಮತದಾನದ ವಿವರ:
ಚಿಕ್ಕೋಡಿ
ಬೆಳಗಾಂ
ಬಾಗಲಕೋಟೆ
ಬಿಜಾಪುರ
ರಾಯಚೂರು
ಬೀದರ್
ಕೊಪ್ಪಳ
ಬಳ್ಳಾರಿ
ಹಾವೇರಿ
ಧಾರವಾಡ
ಉತ್ತರ ಕರ್ನಾಟಕ
ದಾವನಗೆರೆ
ಶಿವಮೊಗ್ಗ
ಕರ್ನಾಟದಲ್ಲಿನ ಮೊದಲ ಹಂತದ ಚುನಾವಣೆ ಬಗ್ಗೆ ವಿವರ:
ಮಾರ್ಚ್ 19 - ನಾಮಪತ್ರ ಸಲ್ಲಿಕೆ ಆರಂಭ
ಮಾರ್ಚ್ 26 - ನಾಮಪತ್ರಕ್ಕೆ ಕೊನೆಯ ದಿನಾಂಕ
ಮಾರ್ಚ್ 27 - ನಾಮಪತ್ರ ಪರಿಶೀಲನೆ
ಮಾರ್ಚ್ 29 - ನಾಮಪತ್ರ ಹಿಂಪಡೆಯಲು ಕೊನೆ ದಿನ
ಎರಡನೇ ಹಂತ:
ಏಪ್ರಿಲ್ 4 - ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಏಪ್ರಿಲ್ 5 - ನಾಮಪತ್ರ ಪರಿಶೀಲನೆ
ಏಪ್ರಿಲ್ 8 - ನಾಮಪತ್ರ ವಾಪಸ್ ಹಿಂಪಡೆಯಲು ಕೊನೆಯ ದಿನ