ಬೆಂಗಳೂರು, ಜ 17 ( DaijiworldNews/MS): ಕೇಂದ್ರ ಸರ್ಕಾರದ 'ಒನ್ ನೇಷನ್ ಒನ್ ಯೂನಿಫಾರ್ಮ್' ಪ್ರಸ್ತಾವನೆಗೆ ರಾಜ್ಯ ಗೃಹ ಇಲಾಖೆ ಒಪ್ಪಿಗೆ ಸೂಚಿಸಿದೆ.
ದೇಶದ ಎಲ್ಲಾ ರಾಜ್ಯಗಳ, ಪೊಲೀಸರಿಗೆ ಅನ್ವಯಾಗುವಂತಹ ಏಕರೂಪದ, ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು, ಕೇಂದ್ರದ ಗೃಹ ಇಲಾಖೆ ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿತ್ತು. ಕರ್ನಾಟಕ ರಾಜ್ಯ ಸರ್ಕಾರ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ.
ಇತ್ತೀಚೆಗೆ ಹರ್ಯಾಣದಲ್ಲಿ ಸೂರಜ್ಕುಂಡ್ನಲ್ಲಿ ನಡೆದಿದ್ದ ಗೃಹ ಸಚಿವರ ಚಿಂತನ್ ಶಿವರ್ನ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ನೀತಿಯನ್ನು ಕಲ್ಪನೆ ಮುಂದಿಟ್ಟಿದ್ದರು.
ಇದು ಒಂದು ‘ಪರಿಕಲ್ಪನೆ’ ಅಷ್ಟೇ ಆಗಿದ್ದು, ಹೇರಿಕೆ ಅಲ್ಲ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಇದೊಂದು ಸಲಹೆಯಾಗಿ ಪರಿಗಣಿಸುವಂತೆ ರಾಜ್ಯಗಳಿಗೆ ಅವರು ಸಲಹೆ ನೀಡಿದ್ದರು. ಅದರಂತೆ ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಅನ್ವಯಗುವಂತಹ ಏಕರೂಪದ ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ.